Mysore
23
scattered clouds

Social Media

ಬುಧವಾರ, 11 ಮಾರ್ಚ್ 2026
Light
Dark

ಮೈಸೂರಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ: ಉಸ್ತುವಾರಿ ಸಚಿವ ಎಚ್‌ಸಿಎಂ

ಮೈಸೂರು: ಹವಾಮಾನ ವೈಪರಿತ್ಯದಿಂದಾಗಿ ರಾಜ್ಯಾದ್ಯಂತ ಭಾರೀ ಮಳೆ ಸುರಿದಿದೆ. ಅದರಲ್ಲೂ ಕೊಡಗು, ಮೈಸೂರು, ಚಾಮರಾಜಗರ ಜಿಲ್ಲೆಗಳಲ್ಲಿ ಮುಂಗಾರು ನಿರೀಕ್ಷೆಗೂ ಮೀರಿ ಉತ್ತಮ ಮಳೆ ನೀಡುವ ಮುನ್ಸೂಚನೆ ನೀಡಿದೆ.

ಇದರ ಜೊತೆಗೆ ಮೈಸೂರಿನಲ್ಲಿ ವಿಪರೀತ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು, ಈ ಬಗ್ಗೆ ನಗರದಲ್ಲಿಂದು (ಶುಕ್ರವಾರ, ಮೇ.24) ಮಳೆ ಸಂಬಂಧ ಮಾಧ್ಯಮಗಳ ಜತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ ಮಹದೇವಪ್ಪ ಮಾತನಾಡಿದ್ದಾರೆ.

ಮಳೆಯಿಂದಾಗಿ ಮೈಸೂರಿನ ಹಲವು ಭಾಗಗಳಲ್ಲಿ ಅಪಾರ ಹಾನಿಯಾಗಿದೆ. ತೋಟಗಾರಿಕೆ ಕೃಷಿಯಲ್ಲಿ ಈವರೆಗೆ ಸುಮಾರು 6900 ಎಕ್ಟೇರ್‌ ನಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರಲ್ಲಿ 4 ಸಾವಿರ ಎಕ್ಟೇರ್‌ ಹಾನಿಯಾಗಿದೆ. ಅದರಲ್ಲಿ 6 ಮನೆಗಳು ಭಾಗಶಃ ನಾಶವಾಗಿದೆ. ಉಳಿದಂತೆ 60 ಗೋಡೆಗಳು ಕುಸಿದಿವೆ. ಮನೆ ಸಂಪೂರ್ಣವಾಗಿ ಬಿದ್ದು ಹೋಗಿರುವುದಕ್ಕೆ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಇನ್ನು ಗೋಡೆ ಕುಸಿತ ಉಂಟಾಗಿರುವುದಕ್ಕೆ 25 ಸಾವಿರ ರೂ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಮಾಜಿ ಮುಖ್ಯಮಂತ್ರಿ ಅವರಿಗೆ ಪರೋಕ್ಷವಾಗಿ ತಿವಿದಿರುವ ಎಚ್‌.ಸಿ ಮಹದೇವಪ್ಪ. ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿ ಬಗ್ಗೆ ಬೇಕಿದ್ದರೆ ಅವರು ಮಾತನಾಡಲಿ, ಅದು ಬಿಟ್ಟು ರಾಜಕೀಯಕ್ಕಾಗಿ ವಿಚಾರ ಮಾಡಲು ಮುಂದಾದರೇ ನನ್ನ ಬಳಿ ಉತ್ತರವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Tags:
error: Content is protected !!