Mysore
25
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಡಿಸಿಎಂ ʻಡಿಕೆಶಿʼ ವಿರುದ್ಧ ʻಎಚ್‌ಡಿಕೆʼ ವಾಗ್ದಾಳಿ

ಮೈಸೂರು: ಯಡಿಯೂರಪ್ಪ ಹಾಗೂ ನನ್ನ ಟಾಕ್‌ವಾರ್‌ ರಾಜಕೀಯವಾದದ್ದು, ನನ್ನ ಮತ್ತು ಬಿಎಸ್‌ ಯಡಿಯೂರಪ್ಪ ವಿರುದ್ಧ ಬಿರುಕು ಮೂಡಿಸಲು ನಿನ್ನೆ ಇದೇ ಸ್ಥಳದಲ್ಲಿ ಹಳೆ ವಿಡಿಯೋ ತುಣುಕು ಬಿಡಿಗಡೆ ಮಾಡಿ ನಕ್ಕಿದ್ದೀರ. ಮಿಸ್ಟರ್‌ ಶಿವಕುಮಾರ್‌ ಇದು ಹೀಗೆ ಇರಲ್ಲ, ಅಧಿಕಾರವೂ ಕೂಡ ಶಾಶ್ವತವಲ್ಲಿ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ ಡೈರೆಕ್ಟ್‌ ಹಿಟ್‌ ಮಾಡಿದರು.

ಯಡಿಯೂರಪ್ಪ ನನಗೆ ನಾಗರಹಾವು ಎಂದಿದ್ದರು ನಿಜ. ಮಿಸ್ಟರ್‌ ಶಿವಕುಮಾರ್‌ ನಿನ್ನ ಪಾಲಿಗೆ ನಾನು ನಾಗರಹಾವು ಎಂದು ತಮ್ಮ ಭಾಷಣದ ಮಧ್ಯೆಯೆ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕರ ವಿಡಿಯೋ ತುಣುಕು ಬಿಡುಗಡೆ ಮಾಡಿದರು.

ನನ್ನ ಅಧ್ಯಕ್ಷತೆಯಲ್ಲಿ 136 ಸೀಟು ಗೆದ್ದಿದೆ ಅಂತೇಳಿದ್ದಾರೆ. ನಿಮ್ಮದೆ ಅಧ್ಯಕ್ಷತೆಯಲ್ಲಿ ಮತ್ತೇಕೆ ಲೋಕಸಭೆ ಚುನಾವಣೆಯಲ್ಲಿ 28 ರಲ್ಲಿ 9 ಸ್ಥಾನ ಬಂತು. ಎಲ್ಲವೂ ನನಗೆ ಗೊತ್ತಿದೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಪರವಾಗಿ ಬಂಡೆಯಾಗಿ ನಿಂತಿದ್ದಾರಂತೆ, ಇದೇ ಮಾತನ್ನು ಈ ಹಿಂದೆ ನನಗೂ ಡಿಕೆ ಶಿವಕುಮಾರ್‌ ಹೇಳಿದ್ರು, ಆ ಬಂಡೆ ನಂಬಿದಕ್ಕೆ ನನ್ನ ತಲೆ ಮೇಲೆಯೇ ಬಂಡೆ ಬಿತ್ತು. ಇದೀಗ, ಆ ಬಂಡೆ ಸಿದ್ದರಾಮಯ್ಯರ ಪರವಾಗಿ ಇದೆಯಂತೆ, ಅವರ ಕಥೆ ಮುಗಿತು ಅನ್ಕೋಳಿ, ಬಂಡೆ ಸಿದ್ದರಾಮಯ್ಯ ಮೇಲೆ ಬಿದ್ದರೆ ಅವರ ಪರಿಸ್ಥಿತಿ ಏನಾಗಲಿದೆ ಎನ್ನುವುದು ಗೊತ್ತಿದೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಸಿಡಿ ಶಿವು ಕಥೆ ಬೇರೆ, ಬೆಂಗಳೂರಲ್ಲಿ ಜೇಡರಹಳ್ಳಿ ಎಂತ ಇದೆ ಅಲ್ಲಿ ಬೇರೆ ಕಥೆ ಇದೆ. ಕೊತ್ವಾಲ್‌ ಅತ್ರ ಜೀವನ ಮಾಡ್ಕೊಂಡು ಇದ್ದೊರಿಗೆ ದೇವೇಗೌಡರ ಕುಟುಂಬದ ಆಸ್ತಿ ವಿವರಬೇಕಾ..?ಎಂದು ಗುಡುಗಿದರು.

ನಾನು ರಾಜಕೀಯ  ಶುರುಮಾಡಿದಾಗ ನಿಖಿಲ್‌ ಹುಟ್ಟಿರಲಿಲ್ಲ ಎಂದಿದ್ದಿರಾ, ಹೆಚ್‌ಡಿ ದೇವೇಗೌಡರು ಕಾವೇರಿ ವಿಚಾರಕ್ಕಾಗಿ ಹೋರಾಟ ಶುರು ಮಾಡಿದಾಗ ನೀವು ಹುಟ್ಟಿದ್ರ ಎಂದು ತಮ್ಮ ಭಾಷಣದ ಬುಹುತೇಕ ಸಮಯ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ ವಾಗ್ದಾಳಿ ನಡೆಸಿದರು.

Tags:
error: Content is protected !!