ನಂಜನಗೂಡು : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೆರವು ನೀಡಿದ್ದಾರೆ.
ನಂಜನಗೂಡು ತಾಲ್ಲೂಕಿ ಹುಲ್ಲಹಳ್ಳಿ ಗ್ರಾಮದ ಪೂಜಾ(೨೪) ಅವರು ದೀರ್ಘಕಾಲದಿಂದ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕುಟುಂಬವು ಆರ್ಥಿಕವಾಗಿ ಹಾಗೂ ಚಿಕಿತ್ಸೆಗಾಗಿ ತೊಂದರೆ ಅನುಭವಿಸುತ್ತಿತ್ತು. ಈ ವಿಷಯ ತಿಳಿದ ಕುಮಾರಸ್ವಾಮಿ ಅವರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಅವರ ಆರೋಗ್ಯ ಸ್ಥಿತಿ ಮತ್ತು ತೊಂದರೆಗಳ ಬಗ್ಗೆ ವಿಚಾರಿಸಿದರು.
ಕುಮಾರಸ್ವಾಮಿ ಅವರು ತಮ್ಮ ವೈಯಕ್ತಿಕ ನೆರವಿನಿಂದ ಆರ್ಥಿಕ ಸಹಾಯ ನೀಡಿದ್ದು, ಮಹಿಳೆಯ ಚಿಕಿತ್ಸೆಗೆ ಅಗತ್ಯವಾದ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ.





