ಎಚ್.ಡಿ ಕೋಟೆ: ಪಟ್ಟಣದ ಸಮೀಪದ ಕಟ್ಟಮನಗನಹಳ್ಳಿ ಗ್ರಾಮದ ಬಳಿ ರೈತರ ಜಮೀನಿನಲ್ಲಿ ನಾಲ್ಕು ವರ್ಷದ ಗಂಡು ಚಿರತೆಯೊಂದು ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಈ ಚಿರತೆ ಬಿದ್ದಿದ್ದು, ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗಿದೆ.
ಗ್ರಾಮದ ನಿವಾಸಿ ರೈತ ಅಂಗಡಿ ಗುರುಸ್ವಾಮಿ ಎಂಬುವರ ಜಮೀನಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮೇಯುತಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಎಳೆದುಕೊಂಡು ಹೋಗುತ್ತಿತ್ತು. ಇದನ್ನು ಗುರುಸ್ವಾಮಿ ಕುಟುಂಬದವರು ಕಿರುಚಾಡಿದಾಗ ಕರುವನ್ನು ಬಿಟ್ಟು ಚಿರತೆ ಪರಾರಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯಯವರು ಜಮೀನಿನಲ್ಲಿ ಬೋನು ಇರಿಸಿ ಸತ್ತು ಹೋಗಿದ್ದ ಕರುವನ್ನು ಒಳಗೆ ಇಟ್ಟಿದ್ದರು. ಇದೀಗ ಕರವನ್ನು ತಿನ್ನಲು ಆಗಮಿಸಿದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ಕಟ್ಟೆ ಮನಗನಹಳ್ಳಿ, ಮೊತ್ತ ಅಲ್ತಾಲ್ಲುಂಡಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಮೇಯುತಿದ್ದ ಕರುಗಳ ಮೇಲೆ ದಾಳಿ ನಡೆಸಿ ಸಾಯಿಸುತ್ತಿದ್ದ ಚಿರತೆಯ ಆರ್ಭಟದಿಂದ ಜನಸಾಮಾನ್ಯರು ಗ್ರಾಮಸ್ಥರು ರೈತರು ಆತಂಕಕ್ಕೆ ಆತಂಕ ಉಂಟು ಮಾಡಿತ್ತು. ಇದೀಗ ಚಿರತೆ ಸೆರೆ ಯಾದ ಹಿನ್ನೆಲೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.





