ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ರೈತ ಬೆಳೆದಿದ್ದ ಒಂದು ಟನ್ ನೇಂದ್ರ ಬಾಳೆಯನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ನಡೆದಿದೆ.
ರೈತ ಶೇಖರ್ ಬಸವರಾಜೇಗೌಡ ಎಂಬವರ ೪ ಎಕರೆ ಬಾಳೆ ತೋಟದಲ್ಲಿ ನೇಂದ್ರ ಬಾಳೆ ಕಟಾವಿಗೆ ಬಂದಿತ್ತು. ಶನಿವಾರ ರಾತ್ರಿ ಕಳ್ಳರ ಗುಂಪು ಸುಮಾರು ಒಂದು ಟನ್ ನೇಂದ್ರ ಬಾಳೆಯನ್ನು ಕಳವು ಮಾಡಿದ್ದಾರೆ. ಕಳ್ಳತನದಿಂದ ಸುಮಾರು ೫೦,೦೦೦ ರೂ. ನಷ್ಟವಾಗಿದೆ ಎಂದು ರೈತ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ರೈತ ಜಮೀನಿಗೆ ಬಂದು ನೋಡಿ ಕಳ್ಳತನವಾಗಿರುವುದನ್ನು ಗಮನಿಸಿ ಹಂಪಾಪುರ ಉಪ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಜಮೀನಿನ ಸುತ್ತಮುತ್ತ ರಾಜಾರೋಷವಾಗಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಳ್ಳತನಕ್ಕೆ ದಾರಿಯಾಗಿದೆ ಎಂದು ಅವರು ದೂರಿದ್ದಾರೆ.