Mysore
16
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಹಳ್ಳಿಹಕ್ಕಿ ಸಹಾ ತಮ್ಮ ಪತ್ನಿ ಹೆಸರಲ್ಲಿ ಮುಡಾದಲ್ಲಿ ನಿವೇಶನ ಹೊಂದಿದ್ದಾರೆ: ಕೆ.ಮರೀಗೌಡ

ಮೈಸೂರು: ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕೂಡಾ ತಮ್ಮ ಪತ್ನಿಯ ಹೆಸರಲ್ಲಿ ಮುಡಾ ನಿವೇಶನವನ್ನು ಹೊಂದಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ಆರೋಪಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.

ವಿಶ್ವನಾಥ್‌ ತಮ್ಮ ಪತ್ನಿ ಶಾಂತಮ್ಮರ ಹೆಸರಿನಲ್ಲಿ 2017ರಲ್ಲಿ 60*40 ಅಳತೆಯ ಬದಲಿ ನಿವೇಶನವನ್ನು ಹೊಂದಿದ್ದಾರೆ. ವಿಶ್ವನಾಥ್‌ ಅವರು ತಮ್ಮ ಪತ್ನಿಯ ಹೆಸರಲ್ಲಿ ನಿವೇಶನ ಪಡೆದಿದ್ದು, ನಿವೇಶನ ಸಂಖ್ಯೆ 2,525ರ ಬದಲಿಗೆ ನಿವೇಶನ ಸಂಖ್ಯೆ 307ರ ಮುಖ್ಯರಸ್ತೆ ಜಾಗ ಪಡೆದಿದ್ದಾರೆ ಎಂದು ಮುಡಾ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ದೇವನೂರು ಮೂರನೇ ಹಂತದ ಬದಲಿಗೆ ಮುಖ್ಯರಸ್ತೆಯಲ್ಲಿ ಎಂಎಲ್‌ಸಿ ಎಚ್.‌ ವಿಶ್ವನಾಥ್‌ ನಿವೇಶನ ಪಡೆದಿದ್ದಾರೆ. ಹಳ್ಳಿಹಕ್ಕಿ ರಾಜಕೀಯವಾಗಿ ದಿವಾಳಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಎಲ್ಲವೂ ಕೂಲಂಕುಶವಾಗಿ ತನಿಖೆ ಆಗಲಿದೆ. ಈ ಬಗ್ಗೆ ಈಗಲೇ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.

Tags:
error: Content is protected !!