ಮೈಸೂರು: ಭಾನುವಾರ ಬೆಳಿಗ್ಗೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಪಡೆದು ವಿಶ್ರಾಂತಿಗಾಗಿ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ಕಾದಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಲ್ಪ ವಿಶ್ರಾಂತಿಗಾಗಿ ಅತಿಥಿ ಗೃಹಕ್ಕೆ ಬಂದ್ರು, ಆದ್ರೆ ಅತಿಥಿ ಗೃಹಕ್ಕೆ ಬೀಗ ಜಡಿಯಲಾಗಿತ್ತು. ಈ ವೇಳೆ ಪ್ರವಾಸಿ ಮಂದಿರದ ಹೊರ ಭಾಗ ಕಾರಿನಲ್ಲೇ ಕುಳಿತ ಎಚ್‌ಡಿಕೆ 10 ನಿಮಿಷ ಕಾದ್ರೂ ಯಾವೊಬ್ಬ ಸಿಬ್ಬಂದಿ ಬಂದಿರಲಿಲ್ಲ. ಕೊನೆಗೆ ಕುಮಾರಸ್ವಾಮಿ ಬೇಸರದಿಂದಲೇ ಮೈಸೂರಿಗೆ ಕಾರಿನಲ್ಲಿ ತೆರಳಿದ್ದಾರೆ.
ಎಚ್‌ಡಿಕೆ ಭೇಟಿ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು ಜತೆಗೆ ಸಚಿವರ ಪ್ರವಾಸ ಪಟ್ಟಿಯನ್ನು ಸಹ ಬಿಡಿಗಡೆ ಮಾಡಲಾಗಿತ್ತು. ಆದರೂ ಸಹ ನಂಜನಗೂಡು ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿದೆ. ಇನ್ನೂ ಈ ಬಗ್ಗೆ ಎಚ್‌ಡಿಕೆ ಜೊತೆಗಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಎಂತಹ ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದಾರೆ.