Mysore
21
overcast clouds
Light
Dark

ವಾಲ್ಮೀಕಿ ಹಗರಣ: ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದ ಜಿಟಿಡಿ

ಮೈಸೂರು: ವಾಲ್ಮೀಕಿ ನಿಗಮದಲ್ಲಿನ 180 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಮೂಲಕ ತನಿಖೆಗೆ ಸಿದ್ದರಾಮಯ್ಯ ಅವರು ಸಹಕರಿಸಬೇಕು ಎಂದು ಜಿಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿಡಿ ದೇವೇಗೌಡ ಹೇಳಿದರು.

ಮೈಸೂರಿನಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಇಲಾಖೆಉ ಖಜಾನೆಯಿಂದಲೇ 180 ಕೋಟಿ ವರ್ಗಾವಣೆ ಆಗಿದೆ. ಆರ್ಥಿಕ ಇಲಾಖೆ ಸಚಿವರಾಗಿರುವ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಜಿಟಿ ದೇವೇಗೌಡ ಒತ್ತಾಯಿಸಿದರು.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಸಿದ್ದಾಂತದ ಆಧಾರದ ಮೇಲೆ ಬಂದವರಾಗಿದ್ದು, ಈ ಹಿಂದೆ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಫೋನ್‌ ಕದ್ದಾಲಿಕೆ ವಿಚಾರಕ್ಕೆ, ಎಸ್‌. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದು, ಸಿದ್ದರಾಮಯ್ಯ ಕೂಡಾ ವಾಲ್ಮೀಕಿ ಹಗರಣ ಸಂಬಂಧ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದರು.