Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸರ್ಕಾರ ಅಲ್ಲಾಡಿಸೋದು ನಿಮ್ಮ ಭ್ರಮೆ: ಮೈತ್ರಿ ನಾಯಕರಿಗೆ ಡಿಕೆಶಿ ಟಾಂಗ್‌

ಮೈಸೂರು: ಮುಂದಿನ ಹತ್ತು ವರ್ಷವಾದ್ರೂ ನಮ್ಮ ಸರ್ಕಾರ ಅಲ್ಲಾಡಿಸೋಕೆ ಆಗಲ್ಲ. ಸರ್ಕಾರ ಉರುಳಿಸುತ್ತೇವೆ ಎನ್ನುವುದು ನಿಮ್ಮ ಭ್ರಮೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮೈತ್ರಿ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

ಶುಕ್ರವಾರ(ಆ.9)  ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ಜನರು ಹಾಗೂ ಸಂವಿಧಾನದ ರಕ್ಷಣೆಗಾಗಿ ನಾವು ಈ ಜನಾಂದೋಲನವನ್ನು ನಡೆಸುತ್ತಿದ್ದೇವೆ. ಬಿಜೆಪಿ-ಜೆಡಿಎಸ್‌ನವರದ್ದು ಪಾಪವಿಮೋಚನೆಯ ಯಾತ್ರೆಯಾಗಿದೆ ಎಂದರು.

ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮಯುದ್ಧವಾಗಿದೆ. ಅಸತ್ಯದ ವಿರುದ್ಧದ ಸತ್ಯದ ಹೋರಾಟವಾಗಿದೆ. ಈ ಸರ್ಕಾರವನ್ನು ಹತ್ತು ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ಬಡವರಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದು ಹೇಳಿದರು.

ಹೇ.. ಮಿಸ್ಟರ್‌ ಕುಮಾರಸ್ವಾಮಿ, ಅಶೋಕ್‌, ವಿಜಯೇಂದ್ರ ನಿಮಗೆ ಸಿಎಂ ರಾಜೀನಾಮೆ ಬೇಕಾ.. ಈ ಬಂಡೆ ಸಿಎಂ ಸಿದ್ದರಾಮಯ್ಯ ಹಿಂದೆ ಇದ್ದಾನೆ… ನನ್ನೊಂದಿಗೆ 136ಜನ ಶಾಸಕರು ಇದ್ದಾರೆ. ನಾವೆಲ್ಲರೂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ನಿಮ್ಮ ಕೈಯಲ್ಲಿ ಏನು ಮಾಡಲಾಗುವುದಿಲ್ಲ ಎಂದು ಗುಡುಗಿದರು.

ನನ್ನ ನೇತೃತ್ವದಲ್ಲಿ 136 ಸೀಟುಗಳನ್ನು ಪಡೆದಿದ್ದೇವೆ. ಅದೇ ಕುಮಾರಸ್ವಾಮಿ ನೇತೃತ್ವದಲ್ಲಿ 19 ಸೀಟು ಬಂದಿದೆ. ಈ ಸರ್ಕಾರ ತೆಗೆಯಲು ಏನೇ ಕುತಂತ್ರ ಮಾಡಿದರೂ ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಕೆಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

Tags: