Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿ : ಮಾಜಿ ಶಾಸಕ ಹರ್ಷವರ್ಧನ್ ಕರೆ

elction get redy

ನಂಜನಗೂಡು : ಶೀಘ್ರದಲ್ಲೇ ಜಿಪಂ, ತಾಪಂ ಚುನಾವಣೆಗಳು ಬರಲಿದ್ದು, ಬಿಜೆಪಿ ಕಾರ್ಯಕರ್ತರು ಅದಕ್ಕೆ ಸಿದ್ಧರಾಗಬೇಕು ಎಂದು ಮಾಜಿ ಶಾಸಕ ಬಿ.ಹಷವರ್ಧನ್ ಕರೆ ನೀಡಿದರು.

ಬುಧವಾರ ತಮ್ಮ ಅವಧಿಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದ ಮುಳ್ಳೂರು ಏತ ನೀರಾವರಿ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದ ಕುರಿತು ನ್ಯಾಯಾಲಯ ಈಗಾಗಲೇ ಸರ್ಕಾರಕ್ಕೆ ಛೀಮಾರಿ ಹಾಕಿದ್ದು ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ಸೂಚನೆ ನೀಡಬಹುದಾಗಿದೆ. ಹಾಗಾದರೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಅದಕ್ಕೆ ಈಗಿನಿಂದಲೇ ಸಿದ್ಧರಾಗಬೇಕು ಎಂದರು.

ಈ ಭಾಗದ ಜನತೆಯ ಕನಸಾದ ಮುಳ್ಳೂರು ಏತ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಮಂಜೂರು ಮಾಡಿಸಲಾಗಿತ್ತು. ನನ್ನ ಶಾಸಕತ್ವದ ಅವಧಿಯಲ್ಲಿ ಆರಂಭವಾದ ಈ ನೀರಾವರಿ ಯೋಜನೆ ೨ ವರ್ಷಗಳಿಂದ ಸ್ಥಗಿತವಾಗಿದೆ. ಹಾಲಿ ಶಾಸಕರು ಜನತೆಗೆ ಉಪಯೋಗವಾಗುವ ಈ ಯೋಜನೆಯನ್ನು ಪುನಾರಂಭಿಸಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ಹುರ ಚಂದ್ರು, ಕಣೇನೂರು ಪರಶಿವಮೂರ್ತಿ, ಬಸವಣ್ಣ, ಮಲ್ಲೇಶ, ಬಸವರಾಜು ಮತ್ತಿತರರು ಹಾಜರಿದ್ದರು.

Tags:
error: Content is protected !!