Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಶುಂಠಿ ಹೊಲದಲ್ಲಿ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ನಾಪತ್ತೆ

ಹುಣಸೂರು: ಶುಂಠಿ ಬೆಳೆ ಮಧ್ಯೆ ಬೆಳೆಸಿದ್ದ ಗಾಂಜಾ ಗಿಡವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ನಾಗರಹೊಳೆ ಉದ್ಯಾನದಂಚಿನ ಗ್ರಾಮದಲ್ಲಿ ನಡೆದಿದೆ.

ಹನಗೋಡು ಹೋಬಳಿಯ ಕೋಣನಹೊಸಳ್ಳಿ ಗ್ರಾಮದ ಹೊಲದಲ್ಲಿ ಕದ್ದುಮುಚ್ಚಿ ಗಾಂಜಾ ಗಿಡ ಬೆಳೆಸಲಾಗಿತ್ತು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಡಿವೈಎಸ್‌ಪಿ ಕೆ.ಟಿ ವಿಜಯಕುಮಾರ್‌ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು, ಈವೇಳೆ 5 ಅಡಿ ಎತ್ತರದ ಸುಮಾರು 2.190 ಗ್ರಾಂ.ನ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆಯಲಾಗಿದೆ.

ಜಮೀನಿನ ಮಾಲೀಕ ನಾಪತ್ತೆಯಾಗಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಬಕಾರಿ ಅಧಿಕಾರಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

Tags:
error: Content is protected !!