ಮೈಸೂರು : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಯುಕೇಶ್ ಕುಮಾರ್ ಅವರು ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ವ್ಯಾಪ್ತಿಯ ಚಾಮನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮನಹಳ್ಳಿ ಕೆರೆಯ ಮೀನುಪಾಶವಾರು ಹಕ್ಕನ್ನು ಶ್ರೀ ಚಾಮುಂಡೇಶ್ವರಿ ಮೀನುಗಾರರ ಸಹಕಾರ ಸಂಘ ಚಾಮನಹಳ್ಳಿರವರಿಗೆ ವಹಿಸಲಾಗಿದ್ದು ಸದರಿ ಕೆರಯಲ್ಲಿ ಪಾಲನೆಯಲ್ಲಿರುವ ರೋಹು ತಳಿ ಮೀನುಮರಿಗಳ ಬೆಳವಣಿಗೆಯನ್ನು ಪರಿಶೀಲಿಸಿದರು.
ಸಹಕಾರ ಸಂಘದ ವತಿಯಿಂದಲೇ ಮೀನು ಮಾರಾಟ ಮಾಡುವುದರಿಂದ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಹೆಚ್ಚಿನ ಲಾಭ ಗಳಿಸಬುಹುದಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಸಂಘದ ಅಧ್ಯಕ್ಷರು ಮಾತನಾಡಿ, ಮೀನು ಮಾರಾಟ ಮಾಡಲು ಹಾಗೂ ಉಪಹಾರ ಗೃಹ ಮಾಡಲು ಸ್ಳಳಾವಕಾಶ ಕಲ್ಲಿಸಿಕೊಡುವಂತೆ ಹಾಗೂ ಕೆರೆಯಲ್ಲಿ ಬೆಳೆದಿರುವ ಜಲಸಸ್ಯ, ಕೆರೆಯ ಏರಿ ದುರಸ್ಥಿ ಮತ್ತು ಹೂಳು ತೆಗೆಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಸಹಾಯಕ ನಿರ್ದೇಶಕರು, ಇಲಾಖೆ ಸಿಬ್ಬಂದಿ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.





