ಮಂಡ್ಯ : ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಬಿಡುತ್ತಿರುವ ನೀರಿನಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಡ್ಯಾಂನಿಂದ ಭಾನುವಾರ 3,838 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಶನಿವಾರ 2,973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇಂದು 900 ಕ್ಯೂಸೆಕ್‌ನಷ್ಟು ನೀರು ಹೆಚ್ಚಳವಾಗಿದೆ. ಅತ್ತ ಕಬಿನಿ ಡ್ಯಾಂನಿಂದಲೂ ತಮಿಳುನಾಡಿಗೆ 1,600 ಕ್ಯೂಸೆಕ್‌ನಷ್ಟು ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ 20.405 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 96.80 ಅಡಿ ನೀರು ಇದೆ.
ಇಂದು ಡ್ಯಾಂಗೆ 6,156 ಕ್ಯೂಸೆಕ್ ನೀರು ಒಳಹರಿವಿದ್ದು, ಡ್ಯಾಂನಿಂದ ಹೊರಹರಿವು 6,874 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ನಾಲೆ ಹಾಗೂ ನದಿಗೆ ಸೇರಿ 6,874 ಕ್ಯೂಸೆಕ್ ನೀರು ಹೊರಹರಿವು ಇದೆ.