Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ತ್ಯಾಗ ಬಲಿದಾನದಿಂದ ದಕ್ಕಿದ ಸ್ವಾತಂತ್ರ್ಯ: ಸವಿತಾ ಘಾಟ್ಕೆ

ಮೈಸೂರು :  ಅಮರ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಅಂಗವಾಗಿ ಇಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಮಹಿಳಾ ಘಟಕ ಮೈಸೂರು ವತಿಯಿಂದ ಚಾಮುಂಡಿ ಬೆಟ್ಟದ ಪಾದದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ  ಕಾರ್ಯಕ್ರಮ   ಉದ್ಘಾಟಿಸಿದರು.

ಚೆನ್ನಮ್ಮ ಒಂದು ಜಾತಿಗೆ ಸೀಮಿತವಾಗದೇ ದೇಶದ ಪ್ರತಿಯೊಬ್ಬರು ಚನ್ನಮ್ಮನನ್ನು ಸ್ಮರಣೆ ಮಾಡಬೇಕು. ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಸವಿತಾ ಘಾಟ್ಕೆ ತಿಳಿಸಿದರು.

.
ಚೆನ್ನಮ್ಮನ ಸಾಹಸಚ `ದೇಶದ ಸ್ವಾತಂತ್ರ್ಯಕ್ಕಾಗಿ ಚೆನ್ನಮ್ಮ ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾವಿರಾರು ವೀರಯೋಧರೊಂದಿಗೆ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಚೆನ್ನಮ್ಮನ ಸಾಹಸ ಎಂದೆಂದಿಗೂ ಅಮರ. ಮಕ್ಕಳಲ್ಲಿ ಚನ್ನಮ್ಮನ ಆದರ್ಶಗಳನ್ನು ಬೆಳೆಸಲು ಪಾಲಕರು ಮುಂದಾಗಬೇಕು’ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷರು ಸವಿತಾ ಘಾಟ್ಕೆ ಸಂಘಟನಾ ಕಾರ್ಯದರ್ಶಿ ಮೀರಾಬಾಯಿ ಸಂಘಟನಾ ಕಾರ್ಯದರ್ಶಿ ವನಿತಾಬಾಯಿ, ಪ್ರೇಮ್ ಕುಮಾರಿ, ಸುಶ್ಮಿತಾ, ಶ್ವೇತಾ, ಶೈಲಾ ,ಮಂಗಳ, ಭಾಗ್ಯವತಿ ,ಹೇಮಾವತಿ,ಹಾಗೂ ಇನ್ನಿತರರು ಹಾಜರಿದ್ದರು.

 
 
 
 
 
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ