Mysore
20
overcast clouds
Light
Dark

ವಿಶ್ವ ಆರೋಗ್ಯ ದಿನದ ಅಂಗವಾಗಿ ಉಚಿತ ಮೂತ್ರಪಿಂಡ ತಪಾಸಣೆ !

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ನಗರದ ಸಿಗ್ಮಾ ಆಸ್ಪತ್ರೆ ವತಿಯಿಂದ ಏ.೭ರಂದು ಉಚಿತ ಮೂತ್ರಪಿಂಡ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ನೆಫ್ರಾಲಜಿ-ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮಾದಪ್ಪ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗ್ಮಾ ಆಸ್ಪತ್ರೆ ವತಿಯಿಂದ ಕಾರ್ಯಕ್ರಮ ನಡೆಸುತ್ತಿದ್ದು, ಕಿಡ್ನಿ ರೋಗವು ಹೆಚ್ಚಾಗುತ್ತಿರುವ ಕಾರಣ ಶೇ.೧೩-೧೭ರಷ್ಟು ಜನರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆುಂಲ್ಲಿ ಏ.೭ರಿಂದ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ರವರೆಗೆ ಉಚಿತ ಮೂತ್ರಪಿಂಡ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಈ ಶಿಬಿರದಲ್ಲಿ ಮೂತ್ರಪಿಂಡ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ, ಬಿಪಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ , ಮೂತ್ರ ಅಲ್ಬುಮಿನ್ ಪರೀಕ್ಷೆ , ಸೀರಮ್ ಕ್ರಿಯೇಟಿನೈನ್, ಮೂತ್ರಪಿಂಡಗಳ ಅಲ್ಟ್ರಾಸೌಂಡ್ ಸ್ಕ್ರೀನಿಂಗ್ ಹಾಗೂ ಉಚಿತ ಸಮಾಲೋಚನೆಯನ್ನು ಒಳಗೊಂಡಿದ್ದು, ಹೆಚ್ಚಿನ ಪರೀಕ್ಷೆಗಳಿಗೆ ಮುಂದಿನ ಒಂದು ತಿಂಗಳಿಗೆ ಶೇ.೧೫ರಷ್ಟು ರಿಾಂಯಿತಿ ಇದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಸಹಯೋಗದೊಂದಿಗೆ ಸೂಪರ್ ಸ್ಪೆಷಾಲಿಟಿ ತರಬೇತಿ ಕಾರ್ಯಕ್ರಮವು ಯುವ ಶಸ್ತ್ರಚಿಕಿತ್ಸಾಕರಿಗೆ ಮೂತ್ರಶಾಸ್ತ್ರದ ಶಸ್ತ್ರಚಿಕಿತ್ಸೆಯಲ್ಲಿ ಉತ್ತಮ ತರಬೇತಿ ನೀಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ನೆಫ್ರಾಲಜಿಸ್ಟ್ ಕನ್ಸಲ್ಟೆಂಟ್ ಡಾ.ಅನಿಕೇತ್ ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.