ರಸ್ತೆ ವಿಭಜಕಗಳಲ್ಲಿ ಬೆಳೆದು ನಿಂತಿರುವ ಹೂವು ಗಿಡ
ಮೈಸೂರು : ಮೈಸೂರು ಮಹಾನಗರ ಪಾಲಿಕೆಯು ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ರಸ್ತೆ ವಿಭಜಕಗಳ ಮಧ್ಯೆ ಖಾಲಿ ಇರುವ ಜಾಗದಲ್ಲಿ ಬಗೆ ಬಗೆಯ ಹೂವು ಗಿಡಗಳನ್ನು ಬೆಳೆಸುತ್ತಿದೆ. ಆದರೆ, ಬೆಳೆದು ನಿಂತಿರುವ ಹೂವು, ಗಿಡಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಬಿಡಾಡಿಗಳ ದನಗಳಿಗೆ ಮೇವು ಸ್ಥಳವಾಗಿ ಮಾರ್ಪಟ್ಟಿದೆ.
ನಗರದ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಕೋರ್ಟ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ವಿಭಜಕದ ಮಧ್ಯೆ ಅಂದವಾದ ಅಲಂಕಾರಿಕ ಹೂವು ಗಿಡಗಳು ಬೆಳೆದು ನಗರದ ಸೌಂದರ್ಯ ಹೆಚ್ಚಿಸುತ್ತಿವೆ. ಆದರೆ ಸೌಂದರ್ಯಕ್ಕೆ ಮೈಸೂರಿಗರೇ ಕುತ್ತು ತರುತ್ತಿರುವುದು ಬೇಸರದ ಸಂಗತಿಯಾಗಿದೆ.
ಪಾಲಿಕೆ ನಿರ್ಲಕ್ಷ್ಯ
ರಸ್ತೆ ವಿಭಜಕಗಳ ನಡುವೆ ಬಗೆ ಬಗೆಯ ಹೂವುಗಳು ಬೆಳೆದು ನಿಂತಿವೆ. ಆದರೆ, ಪಾಲಿಕೆಯ ಈ ಯೋಜನೆಗೆ ಸ್ವತಃ ಪಾಲಿಕೆಯೇ ನಿರ್ಲಕ್ಷ್ಯ ವಹಿಸುತ್ತಿದ್ದು, ಬೆಳೆದು ನಿಂತ ಹೂವುಗಿಡಗಳಿಗೆ ಯಾವುದೇ ರಕ್ಷಣೆ ನೀಡಿಲ್ಲಿ. ಪ್ರತಿನಿತ್ಯ ಬಿಡಾಡಿ ದನಗಳಿಂದ ಬಂದು ಹೂವುಗಿಡಗಳನ್ನು ಮೇವು ಸ್ಥಳಗಳನ್ನಾಗಿ ಮಾಡಿಕೊಂಡು, ಹೂವು ಗಿಡಗಳನ್ನ ಹಾಳುಮಾಡುತ್ತಿವೆ.
ಸರಿಯಾದ ನಿರ್ವಹಣೆ ಇಲ್ಲದೆ ಪಾಲಿಕೆ ಕನಸಿನ ಯೋಜನೆ ಮಣ್ಣು ಪಾಲಾಗಿದ್ದು, ಬೆಳೆದು ಹೂವು ಬಿಟ್ಟ ಗಿಡಗಳನ್ನು ಬಿಡಾಡಿ ದನಗಳು ತಿಂದು ತೇಗುತ್ತಿವೆ. ಈ ಬಗ್ಗೆ ಪಾಲಿಕೆ ಗಮನಹರಿಸಿ ಸರಿಯಾದ ನಿರ್ವಹಣೆ ಮಾಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.





