Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಚಂದ್ರಶೇಖರ್‌ ಸ್ವಾಮೀಜಿ ವಿರುದ್ಧ FIR: ಸರ್ಕಾರದ ವಿರುದ್ದ ವಿಶ್ವನಾಥ್‌ ಕಿಡಿ

ಮೈಸೂರು: ಮುಸ್ಲಿಂರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿಕೆ ನೀಡಿ ಬಳಿಕ ಈ ಬಗ್ಗೆ ಕ್ಷಮೆಯಾಚಿಸಿದ ಚಂದ್ರಶೇಖರ್‌ ಸ್ವಾಮೀಜಿ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ ಎಂದು ಎಂಲ್‌ಸಿ ಎಚ್.ವಿಶ್ವನಾಥ್‌ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಆಗಿರುವ ಎಫ್‌ಐಆರ್‌ ಖಂಡನೀಯ. ಬಾಯತಪ್ಪಿ ಹೇಳಿರುವ ಮಾತಿಗೆ ಕ್ಷಮೆ ಕೋರಿದ್ದಾರೆ. ಇಳಿ ವಯಸ್ಸಿನಲ್ಲಿ ಅವರಿಗೆ ತೊಂದರೆ ಕೊಡಬಾರದು. ಕೂಡಲೇ ಅವರ ವಿರುದ್ಧದ ಪ್ರಕರಣವನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಮುಡಾ ಹಿಂದಿನ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ದೂರು ದಾಖಲಿಸಿ
ಮುಡಾ ಆಸ್ತಿಗೆ ಅಧ್ಯಕ್ಷರು ಹಾಗೂ ಆಯುಕ್ತರೇ ಮಾಲೀಕರು. ಅಕ್ರಮ ಪ್ರಕರಣಗಳು ದಾಖಲಾದರೂ ದೂರು ಕೊಟ್ಟಿಲ್ಲವೇಕೆ? ಇಷ್ಟಾದ ಮೇಲೂ ಜಿಲ್ಲಾಧಿಕಾರಿಗಳು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಸರಿಯಲ್ಲ. ಹಿಂದಿನ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ತಕ್ಷಣ ದೂರು ದಾಖಾಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಮುಡಾದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದಿದ್ದರೆ, ನಿವೇಶನ ಪಡೆದವರು ಪ್ರಾಣ ಕಳೆದುಕೊಳ್ಳುವ ಅಪಾಯ ಎದುರಾಗಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಆಗ್ರಹಿಸಿದ ಅವರು ಮುಡಾನೇ ಅಕ್ರಮದ ಬಗ್ಗೆ ದೂರು ಕೊಟ್ಟಿಲ್ಲ ಎಂದು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಮುಡಾದಿಂದ 140 ಫೈಲ್‌ಗಳನ್ನು ಐಎಎಸ್‌ ಅಧಿಕಾರಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ ಎಂದು ಲೋಕಾಯುಕ್ತ ಟಿಪ್ಪಣಿಯಲ್ಲಿ ಹೇಳಿದ್ದಾರೆ. ಅವು ಯಾರಿಗೆ ಸಂಬಂಧ ಪಟ್ಟವು ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು.

ಹಾಸನದಲ್ಲಿ ನಿಯೋಜನೆಗೊಂಡಿರುವ ಸಮಾವೇಶ ಯಾರಿಗೋಸ್ಕರ? ಸಿದ್ದರಾಮಯ್ಯ ಅವರಿಗೆ ಸಂಕಟ ಬಂದಾಗಲೆಲ್ಲಾ ಈ ತರಹದ ಸಮಾವೇಶ ಏರ್ಪಡಿಸುತ್ತಾರೆ. ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

 

Tags: