Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಅನವಶ್ಯಕ ಟ್ರೋಲ್‌ ಮಾಡಿದರೆ ದೂರು ದಾಖಲು : ಎಂ.ಲಕ್ಷ್ಮಣ್‌ ಎಚ್ಚರಿಕೆ !

ಮೈಸೂರು : ಅನವಶ್ಯಕವಾಗಿ ಸಿದ್ದರಾಮಯ್ಯ ವಿರುದ್ಧ ಟ್ರೋಲ್‌ ಮಾಡಿದರೆ ದೂರು ದಾಖಲು ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ಟ್ರೋಲರ್ಸ್‌ಗೆ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ತಿಳಿದು ಟ್ರೋಲ್‌ ಮಾಡಬೇಕು. ಬಾಯಿಗೆ ಬಂದಂತೆ ಮಾಡಿದರೆ ನಿಮ್ಮ ಅಕ್ಕ-ತಂಗಿ, ತಾಯಿ-ತಂದೆಗೆ ಟ್ರೋಲ್‌ ಮಾಡಿದಹಾಗೆ ಎಂದು ಹೇಳಿದರು.

ಬಾಯಿಗೆ ಬಂದಹಾಗೆಲ್ಲಾ ಟ್ರೋಲ್‌ ಮಾಡುತ್ತಾರೆ. ಒಂದು ವ್ಯವಸ್ತೆ ಬೇಡವೆ? ಸಿದ್ದರಾಮಯ್ಯ ಭಾಷಣದಲ್ಲಿ ನಮ್ಮ ಮನೆಯವರು ಯಾವತ್ತೂ ಒಳಗೆ ಬಂದವರಲ್ಲ ಎಂದು ಹೇಳಿದ್ದಕ್ಕೆ ಒಂದು ಟ್ರೋಲ್‌ ಮಾಡುತ್ತಾರೆ. ಯಾವುದರಲ್ಲಿ ಹೊಡಿಬೇಕು ಇವರಿಗೆ ಎಂದು ಕಿಡಿ ಕಾರಿದರು.

ನಿಮ್ಮ ತೆವಲಿಗೆ ಸುಳ್ಳು ಸುಳ್ಳನ್ನೇ ಟ್ರೋಲ್‌ ಮಾಡಿದರೆ ನಿಮ್ಮ ತಂದೆ-ತಾಯಿ ಹಾಗೂ ಅಕ್ಕ-ತಂಗಿಯರಿಗೆ ಟ್ರೋಲ್‌ ಮಾಡಿದ ಹಾಗೆ ಎಂದರು.

ಟೋಲ್‌ ಮಾಡಿದರೆ ಯಾರು ಕೇಳಲ್ಲ, ಏನು ಆಗಲ್ಲ ಎಂಬ ವ್ಯವಸ್ಥೆ ಇದೆ ಎಂದು ಹೀಗೆ ಮಾಡುತ್ತಿದ್ದೀರಾ. ಸೈಬರ್‌ ಕ್ರೈಂಗೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Tags:
error: Content is protected !!