Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ ಅಧಿಕಾರಿ

ಪಿರಿಯಾಪಟ್ಟಣ: ಕೆಲಸದ ಬಿಲ್‌ ಪಾವತಿ ಮಾಡುವ ವಿಚಾರವಾಗಿ ವ್ಯಕ್ತಿಯೊರ್ವನಿಂದ ಲಂಚ ಪಡೆಯುತ್ತಿದ್ದ ಎಫ್‌ಡಿಎ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಫ್‌ಡಿಎ ಅಧಿಕಾರಿ ವಿಜಯ್‌ ಶಂಕರ್‌ ಲೋಕಾಯುಕ್ತ ಬಲೆಗೆ ಬಿದ್ದವರು. ನಟೇಶ್‌ ಎಂಬ ವ್ಯಕ್ತಿಯ ಬಿಲ್‌ ಪಾಸ್‌ ಮಾಡಲು ಆತನಿಂದ ಚೆಕ್‌ವೊಂದನ್ನ ಪಡೆಯಲಾಗಿತ್ತು. ಚೆಕ್‌ ಹಿಂದುರಿಗಿಸಲು 30 ಸಾವಿರ ರೂ ಬೇಡಿಕೆ ಇಡಲಾಗಿತ್ತು. ಇದರಿಂದ ಬೇಸತ್ತ ನಟೇಶ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಕಾರ್ಯಚರಣೆಗಿಳಿದ ಲೋಕಯುಕ್ತ ಪೊಲೀಸರು ಗುರುವಾರ(ಮೇ.16) ವಿಜಯ್‌ ಶಂಕರ್ ತಮ್ಮ ಕಚೇರಿಯ ಬಳಿ ದೂರುದಾರ ನಟೇಶ್‌ರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಸಜಿತ್‌ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಡಿವೈಎಸ್‌ಪಿ ವಿ.ಕೃಷ್ಣಯ್ಯ, ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್‌, ರೂಪಶ್ರೀ, ಲೋಕೇಶ್‌ ಹಾಗೂ ಸಿಬ್ಬಂದಿ ಮೋಹನ್‌ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್‌,ಲೋಕೇಶ್‌, ಪೃಥ್ವಿಷ, ಶೇಖರ್‌ ಇದ್ದರು.

Tags: