ಮೈಸೂರು : ಎತ್ತಿನಗಾಡಿಗೆ ಹಸಿರು ತೋರಣ ಕಟ್ಟಿ, ಒಣಗಿದ ಕಬ್ಬಿನ ಜಲ್ಲೆಯನ್ನು ಹಿಡಿದು ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ಮತದಾನ ಕೇಂದ್ರಕ್ಕೆ ತೆರಳಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುವಾರ್ ಹಾಗೂ ಪದಾಧಿಕಾರಿಗಳು ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಎತ್ತಿನಗಾಡಿಯಲ್ಲಿ ಮತ ಕೇಂದ್ರಕ್ಕೆ ಆಗಮಿಸಿದ ರೈತರೊಂದಿಗೆ ಮಾತನಾಡಿದ ಅವರು, ಬರಗಾಲದ ಸಂಕಷ್ಟದಲ್ಲೂ ರೈತರು ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಾಡುತ್ತಿದ್ದೇವೆ.
ಬರಗಾಲದಿಂದ ದನ ಕರುಗಳಿಗೆ ಮೇವು-ಕುಡಿಯುವ ನೀರು ಇಲ್ಲದಂತಾಗಿದೆ. ಪರಿಹಾರದ ಹಣ ಸಿಗದಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದೇಶ್, ಗೌರಿಶಂಕರ್, ಪ್ರದೀಪ್, ಶ್ರೀಕಂಠ, ಕಿರಣ್, ನಂದೀಶ್, ರಾಜೇಶ್, ಕೃಷ್ಣರಾಜ ಅರಸ್, ಶಿವಪ್ರಸಾದ್ ಮತದಾನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.