ಎಚ್.ಡಿ.ಕೋಟೆ: ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮದ ರೈತ ನಾಗೇಶ್ (೪೨) ಶುಂಠಿ ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸುವಾಗ ಮೃತಪಟ್ಟಿದ್ದಾರೆ.
ಶನಿವಾರ ಬೆಳಿಗ್ಗೆ ಕಳೆ ನಾಶಕವನ್ನು ಸಿಂಪಡಿಸಲು ಹೋಗಿದ್ದ ನಾಗೇಶ್ ಮಧ್ಯಾಹ್ನವಾದರೂ ಮನೆಗೆ ಮರಳಿರಲಿಲ್ಲ. ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಈ ವೇಳೆ ಮನೆಯವರು ಜಮೀನಿಗೆ ಹೋಗಿ ನೋಡಿ ದಾಗ ರೈತ ಮೃತಪಟ್ಟಿರುವುದು ತಿಳಿದುಬಂದಿದೆ
ಔಷಧ ಸಿಂಪಡಣೆ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಇರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಇತ್ತೀಚೆಗೆ ರೈತರು ಹೆಚ್ಚಾಗಿ ಕಳೆನಾಶಕವನ್ನು ಬಳಕೆ ಮಾಡುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ಜತೆಗೆ ಮನುಷ್ಯರ ಆರೋಗ್ಯದ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರ ಈ ಸಂಬಂಧ ಸೂಕ್ತ ಮಾರ್ಗಸೂಚಿ ಪ್ರಕಟಿಸಬೇಕು. ರೈತರ ಜೀವ ಮತ್ತು ಜೀವನಕ್ಕೆ ಮಾರಕವಾಗಿರುವ ಔಷಧಗಳನ್ನು ನಿಷೇಽಸಬೇಕು. ಜತೆಗೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





