ಹುಣಸೂರು : ಹನಗೋಡು ಸಮೀಪದ ಕಿರಂಗೂರು ಗ್ರಾಮದಲ್ಲಿ ರೈತನೊಬ್ಬ ಸಾಲಭಾದೆಗೆ ಹೆದರಿ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಮು ಕೆ ಬಿ (38) ಮೃತ ರೈತ.
ಮೃತರು ತಮ್ಮ ಜಮೀನಿನಲ್ಲಿ ಮುಸುಕಿನ ಜೋಳ, ರಾಗಿ ಮತ್ತು ಶುಂಠಿ ಬೆಳೆಯನ್ನು ಬೆಳೆದಿದ್ದರು. ಈ ಬೇಸಾಯಕ್ಕೆಂದು ಮೃತನ ತಂದೆ ಬಸವೇಗೌಡ ಹೆಸರಿನಲ್ಲಿ ಕಟ್ಟೆಮಳಲವಾಡಿ ಐಓಬಿ ಬ್ಯಾಂಕ್ ನಲ್ಲಿ 5ಲಕ್ಷ ಸಾಲ ಮಾಡಿದ್ದರು. ಬೆಳೆಯಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮತ್ತು ಅವರ ಅನಾರೋಗ್ಯ ನಿಮಿತ್ತ ಅವರಿಗೆ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಮಾಡಿದ ಸಾಲವನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರ ಶಿವು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮೃತರು ಪತ್ನಿ ಸಂಗೀತಾ ಹಾಗೂ ಏಳು ವರ್ಷದ ಗಂಡು ಮಗು ಐದು ವರ್ಷದ ಹೆಣ್ಣು ಮಗು ಇದ್ದಾರೆ ಮೃತರ ಮನೆಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದರು