ನಂಜನಗೂಡ : ಆಸ್ತಿ ವಿಚಾರಕ್ಕೆ, ತಾಲೂಕಿನ ಶಿರವಳ್ಳಿ (Shiravalli) ಗ್ರಾಮದ ಒಂದೇ ಕುಟುಂಬದವರ ನಡುವೆ ಗಲಾಟೆಯಾಗಿದೆ.
ಕುಟುಂಬದ ಆಸ್ತಿ ನೊಂದಣಿ ಮಾಡಿಕೊಳ್ಳಲು ನಂಜನಗೂಡು ಉಪನೊಂದಣಾಧಿಕಾರಿ ಕಛೇರಿಗೆ ಬಂದಿದ್ದ ವೇಳೆ ಮಿನಿ ವಿಧಾನಸೌಧ ಆವರಣದಲ್ಲಿ ಪರಸ್ಪರ ಹೊಡೆದಾಟಿಕೊಂಡಿದ್ದಾರೆ.
ಆಸ್ತಿ ನೊಂದಣಿ ಮಾಡಿಸಲು ಎರಡು ಕುಟುಂಬಗಳು ಉಪನೊಂದಣಾಧಿಕಾರಿ ಕಛೇರಿಗೆ ಬಂದಿವೆ. ಈ ವೇಳೆ ತಾಯಿಯು ಹೆಣ್ಣು ಮಗಳ ಆಸ್ತಿಗೆ ಮೊದಲು ಸಹಿ ಹಾಕಿದ್ದಾರೆ. ಹೆಣ್ಣು ಮಗಳಿಗೆ ಆಸ್ತಿ ನೀಡುವುದನ್ನು ಸಹಿಸದ ಗಂಡು ಮಕ್ಕಳಿಂದ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆ ಹೊಡೆದಾಟ ಸಹ ಆಗಿದೆ.
ಸದ್ಯ ಈ ಘಟನೆ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




