ಮೈಸೂರು : ಮಕ್ಕಳು ಪ್ರೀತಿಸಿ ಅನ್ಯಜಾತಿಯವರನ್ನು ಮದುವೆಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಸಂಬಂಧಿಕರು ಮಹಿಳೆಯೊಬ್ಬರ ಅಂತ್ಯಕ್ರಿಯೆ ನಡೆಸದಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ.
ಮೃತ ಕಳಸಮ್ಮರ ಇಬ್ಬರು ಹೆಣ್ಣುಮಕ್ಕಳು ಪ್ರೀತಿಸಿ ಮದುವೆಯಾಗಿದ್ದರು. ಇದೇ ಕಾರಣಕ್ಕೆ ತಾಯಿಯ ಅಂತಿಮ ದರ್ಶನ ಪಡೆಯದಂತೆ ಮತ್ತು ಅಂತ್ಯಕ್ರಿಯೆ ನಡೆಸದಂತೆ ಈ ಹೆಣ್ಣುಮಕ್ಕಳಿಗೆ ಸಂಬಂಧಿಕರು ಮತ್ತು ಸ್ವಜಾತಿ ಮುಖಂಡರು ತಾಕೀತು ಮಾಡಿದ್ದರು. ಆದರೂ ಕೂಡ ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಸಂಬಂಧಿಕರು ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆ. ಕೊನೆಗೆ ಗ್ರಾಮಸ್ಥರ ಸಹಾಯದಿಂದ ಮಕ್ಕಳು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.





