ನಂಜನಗೂಡು: ಇಲ್ಲಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಮ್ಮಾವು ಬಳಿ ದಾಸ್ತಾನುಗಿಂತ ಹೆಚ್ಚುವರಿಯಾಗಿ ಶೇಖರಿಸಿಟ್ಟಿದ್ದ 98ಕೋಟಿ ರೂ.ಗೂ ಹೆಚ್ಚು ಮೊತ್ತದ ಬಿಯರ್, ಕಚ್ಚಾವಸ್ತುಗಳನ್ನು ಜಪ್ತಿಮಾಡಲಾಗಿದೆ.
ಘಟಕದಲ್ಲಿದ್ದ 6.03 ಲಕ್ಷ ಬಿಯರ್ ಪೆಟ್ಟಿಗೆಗಳು, ಕೆಗ್‌ಗಳಲ್ಲಿರುವ 23,160 ಲೀಟರ್, ದಾಸ್ತಾನು 5.16ಲಕ್ಷ ಲೀಟರ್, ಯುಟಿ ಟ್ಯಾಂಕ್‌ನಲ್ಲಿರುವ 66.16 ಲಕ್ಷ ಲೀಟರ್ ಬಿಯರ್ ಇನ್ನೀತರ ಕಚ್ಚಾವಸ್ತು ಸೇರಿದಂತೆ ಒಟ್ಟು 98.52 ಕೋಟಿ ಮೌಲ್ಯದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು ತಾಲ್ಲೂಕು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆ ವ್ಯಾಪ್ತಿಗೆ ಬರುವ ಹಿನ್ನಲೆಯಲ್ಲಿ ಪೊಲೀಸರು ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿಗಳು ಅನುಮತಿ ಮೇರೆಗೆ ದಾಳಿ ನಡೆದಿದೆ ಎನ್ನಲಾಗಿದೆ.





