ಮೈಸೂರು : ವೇಮನ ಹಾಗೂ ಅಂಬಿಗರ ಚೌಡಯ್ಯನವರಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನ ಪಾಲಿಸಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಹೇಳಿದರು.
ಇಂದು ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಮಹಾಯೋಗಿ ಶ್ರೀ ವೇಮನ ಜಯಂತಿ ಮತ್ತು ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳು ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದು ಜನರು ಭಾಗವಹಿಸಿ ಇದರಿಂದ ಸಿಗುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕಿಗಳಾಗಲಿ ಎಂದು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ವಿಚಾರ ಹಾಗೂ ತಿಳುವಳಿಕೆಗಳು ಹೆಚ್ಚಾಗುತ್ತವೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಯ ಸಮಯ ಬರುತ್ತದೆ. ಆ ಸಮಯವನ್ನು ಅರಿತು ಉತ್ತಮರಾಗಬೇಕು. ಮನುಷ್ಯ ಶುದ್ದಿಯಾಗಬೇಕೆಂದರೆ ಗಣ್ಯ ವ್ಯಕ್ತಿಗಳನ್ನು ಅನುಸರಿಸಿ ಸಮಾಜದಲ್ಲಿರುವ ಮಾಲಿನ್ಯವನ್ನು ತೊಲಗಿಸಬೇಕು.
ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಬಂದಾಗ ಅವುಗಳನ್ನು ತೊರೆದು ಒಳ್ಳೆಯ ವಿಚಾರದತ್ತ ಗಮನ ಕೊಡಬೇಕು. ಕ್ರೋದ, ಮದ -ಮತ್ಸರಗಳನ್ನು ಬಿಟ್ಟು ಸಹಬಾಳ್ವೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಆರ್. ಲೋಕನಾಥ್, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸೋಮಶೇಖರ್, ಕನ್ನಡಪರ ಹೋರಾಟಗಾರರಾದ ವಿಠಲ್ ಮೂರ್ತಿ, ಪ್ರೊ. ಜ್ಯೋತಿ ಶಂಕರ್, ನಿವೃತ್ತ ಪ್ರಧ್ಯಾಪಕರಾದ ಪ್ರೊ. ಎಚ್. ಎಂ. ವಸಂತಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.