Mysore
14
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮೈಸೂರು ಮೃಗಾಲಯವನ್ನು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲಾಗುವುದು: ಸಚಿವ ಈಶ್ವರ್ ಖಂಡ್ರೆ

ಮೈಸೂರು: ಮೈಸೂರು ಮೃಗಾಲಯವನ್ನು ಅಭಿವೃದ್ಧಿ ಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಇಂದು ಮೈಸೂರು ಮೃಗಾಲಯದಲ್ಲಿ ವಾಟ್ಸ್ ಅಪ್ ಟಿಕೆಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರ ವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿದರು. ನಂತರ ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು.

Tags:
error: Content is protected !!