ಸರಗೂರು: ಅರಣ್ಯದ ರೈಲ್ವೆ ಕಂಬಿಗೆ ಸಿಲುಕಿ ನರಳಾಡುತ್ತಿದ್ದ ಆನೆಯನ್ನು ರಕ್ಷಣೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಬಾಡಗ ಗ್ರಾಮದಲ್ಲಿ ನಡೆದಿದೆ.
ಕಾಡಿನಿಂದ ನಾಡಿಗೆ ಬರುವ ಪ್ರಯತ್ನದಲ್ಲಿ ಆನೆಯೊಂದು ರೈಲು ಕಂಬಿ ಮಧ್ಯೆ ಸಿಲುಕಿ ಹಿಂದೆಯೂ ಬರಲಾಗದೇ ಮುಂದೆಯೂ ಹೋಗಲಾಗದೇ ತೀವ್ರ ಪರದಾಟ ನಡೆಸುತ್ತಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ರೈಲು ಕಂಬಿಗಳನ್ನು ಸಡಿಲಗೊಳಿಸಿದ್ದಾರೆ. ಈ ವೇಳೆ ಕಾಡಾನೆ ಬದುಕಿದೆಯಾ ಬಡಜೀವವೇ ಎಂಬಂತೆ ಮತ್ತೆ ಕಾಡಿಗೆ ವಾಪಸ್ ತೆರಳಿದೆ.





