ಮೈಸೂರು : ಗ್ರೇಟರ್ ಬೆಂಗಳೂರಿಗೆ ಶೀಘ್ರವೆ ಚುನಾವಣೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗರಾರೊಂದಿಗೆ ಮಾತನಾಡಿ ಅವರು, ಗ್ರೇಟರ್ ಬೆಂಗಳೂರಿಗೆ ಕ್ಯಾಬಿನೆಟ್ ನಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಪ್ಪಿದ್ದಾರೆ. ಹೀಗಾಘಿ ಶೀಘ್ರವೇ ಸಬ್ ಕಮಿಟಿ ಮಾಡಿ ಚುನಾವಣೆ ನಡೆಸುತ್ತೇವೆ ಎಂದರು.
ಗ್ರೇಟರ್ ಬೆಂಗಳೂರು ಅಲ್ಲ ಕ್ವಾಟರ್ ಬೆಂಗಳೂರು ಎಂಬ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲೇ ವಿರೋಧ ಮಾಡಬಹುದಿತ್ತು. ಆದರೆ ಅಶೋಕ್ ಮಾಡಲಿಲ್ಲ. ವಿಪಕ್ಷ ನಾಯಕನಾಗಿ ಅಷ್ಟು ಟೀಕೆ ಮಾಡದಿದ್ರೆ ಹೇಗೆ. ಅವರಿಗೆ ನಾವು ಗೌರವ ಕೊಡ್ತೀವಿ. ಆದ್ರೆ ಅವರೇ ಗ್ರೇಟರ್ ಬೆಂಗಳೂರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ರು ? ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ಇವರೆಲ್ಲರೂ ಒಪ್ಪಿದ್ದಾರೆ. ಈಗ ವಿಪಕ್ಷವಾಗಿ ಟೀಕೆ ಮಾಡ್ತಾರೆ.
ಅವರ ಕೆಲಸ ಅವರು ಮಾಡಲಿ ಎಂದು ಹೇಳಿದರು.
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಕೂಡ ಶೀಘ್ರವೇ ಆಗುತ್ತದೆ. ಶುಭ ಗಳಿಗೆ ಶುಭ ಮುಹೂರ್ತ ಬರ್ತಾ ಇದೆ ಎಂದು ಪರೋಕ್ಷವಾಗಿ ಹೇಳಿದರು.





