ಮೈಸೂರು: ಮುಡಾ ನಿವೇಶನಗಳ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ ಮೇಲಿನ ಇಡಿ ದಾಳಿ ಅಂತ್ಯವಾಗಿದ್ದು, ಇಡಿ ಅಧಿಕಾರಿಗಳು ಎರಡೂ ದಿನಗಳಿಂದ ಸತತ 29 ಗಂಟೆ ಶೋಧಿಸಿ ಮಹತ್ವದ ದಾಖಲೆ ಕಲೆಹಾಕಿ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾರೆ.
ಇಡಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲನೇ ದಿನ 12 ಗಂಟೆ ಹಾಗೂ ಎರಡನೇ ದಿನ 17 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಒಟ್ಟು 29 ಗಂಟೆಗಳ ಕಾಲದ ವಿಚಾರಣೆಯಲ್ಲಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಆ ನಂತರ ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದಾರೆ. ಅಲ್ಲದೇ, ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಾವಿರಾರು ಪುಟಗಳ ದಾಖಲೆ ಜೊತೆಗೆ ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.





