Mysore
17
few clouds

Social Media

ಶನಿವಾರ, 24 ಜನವರಿ 2026
Light
Dark

ದಸರಾ ಮಹೋತ್ಸವ : ಅಪಾಯಕಾರಿ ಮರಗಳ ರೆಂಬೆ, ಕೊಂಬೆ ತೆರವು ಕಾರ್ಯ ಶುರು

ಮೈಸೂರು : ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಸುತ್ತಮುತ್ತಲಿನ ಹಾಗೂ ನಗರದ ಸೌಂದರ್ಯ ವೀಕ್ಷಣೆಗೆ ಅಡೆತಡೆಯಾಗಿದ್ದ ಮರಗಳ ರೆಂಬೆ ಹಾಗೂ ಕೊಂಬೆಗಳ ತೆರವು ಕಾರ್ಯಾಚರಣೆ ಶುರುವಾಗಿದೆ.

ಜಂಬೂಸವಾರಿ ಸಾಗುವ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ರಸ್ತೆ ಬದಿಗಳಲ್ಲಿನ ಬೃಹತ್ ಮರಗಳಲ್ಲಿ ಒಣಗಿರುವ ಅಪಾಯಕಾರಿ ರೆಂಬೆ ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಅದರಂತೆ ಇಂದು ಅರಮನೆ ಸುತ್ತ ಇರುವ ರಸ್ತೆಗಳು, ಗನ್‌ಹೌಸ್ ರಸ್ತೆ, ಹಾರ್ಡಿಂಗ್ ವೃತ್ತ, ಕಾಡಾ ಕಚೇರಿ ರಸ್ತೆ, ಕೆ.ಆರ್.ರಸ್ತೆಗಳಲ್ಲಿ ಇರುವ ಬೃಹತ್ ಮರಗಳನ್ನು ಪರಿಶೀಲಿಸಿದ ಬಳಿಕ, ಒಣಗಿ ಬೀಳುವ ಮಟ್ಟದಲ್ಲಿರುವ ರೆಂಬೆ-ಕೊಂಬೆಗಳನ್ನು ಯಂತ್ರದ ಮೂಲಕ ಕತ್ತರಿಸಲಾಯಿತು.

ಇದನ್ನು ಓದಿ:ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡಹಬ್ಬ: ಸಿಎಂ ಸಿದ್ದರಾಮಯ್ಯ

ಹಾರ್ಡಿಂಜ್ ವೃತ್ತದಿಂದ ಗನ್ ಹೌಸ್ ವೃತ್ತದವರೆಗೆ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಸಿಬ್ಬಂದಿ ಮಾಡಿದರು. ಕಾರ್ಯಾಚರಣೆ ವೇಳೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.

ದಸರಾ ದೀಪಾಲಂಕಾರಕ್ಕಾಗಿ ಹಲವೆಡೆ ಕಂಬಗಳನ್ನು ಅಳವಡಿಸುತ್ತಿರುವ ಚಾಮುಂಡೇಶ್ವರಿ ವಿದ್ಯತ್ ಸರಬರಾಜು ನಿಗಮದವರು ಕೂಡ ಮರಗಳಿಂದ ಅಪಾಯಕಾರಿ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಿ ಜಾಗ್ರತೆ ವಹಿಸುತ್ತಿದೆ. ಮಳೆಯಾದರೆ ಹಸಿ ಮರಗಳಿಗೆ ವಿದ್ಯುತ್ ಸ್ಪರ್ಶಿಸಿ ಅಪಾಯ ಎದುರಾಗಬಹುದು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾಯಕಾರಿ ಮರಗಳ ರೆಂಬೆ, ಕೊಂಬೆ ತೆರವುಗೊಳಿಸಲಾಗುತ್ತಿದೆ.

Tags:
error: Content is protected !!