ಎಚ್.ಡಿ.ಕೋಟೆ: ಆಹಾರ ಸುರಕ್ಷತಾ ಅಧಿಕಾರಿ ಡಾ.ರವಿಕುಮಾರ್ ಅವರು ಹ್ಯಾಂಡ್ ಪೋಸ್ಟ್ ಮತ್ತು ಹಂಪಾಪುರ ಗ್ರಾಮದಲ್ಲಿ ಇರುವ ಐಸ್ ಕ್ರೀಮ್ ಘಟಕಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಪೂರ್ಣ ಘಟಕಗಳನ್ನು ಪರಿಶೀಲನೆ ನಡೆಸಿದ ಡಾ.ರವಿಕುಮಾರ್ ಅವರು, ಕೃತಕ ಬಣ್ಣ ಬಳಸುತ್ತಿದ್ದ ಘಟಕಗಳಿಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿದರು.
ಬಳಿಕ ಮಾತನಾಡಿದ ಅವರು, ಐಸ್ ಕ್ರೀಮ್‌ಗಳನ್ನು ತಯಾರಿಸುವಾಗ ಶುದ್ಧವಾದ ನೀರನ್ನು ಉಪಯೋಗಿಸಿ ತಯಾರು ಮಾಡಬೇಕು. ಯಾವುದೇ ರೀತಿಯ ಬಣ್ಣಗಳನ್ನು ಹಾಕಬಾರದು. ಐಸ್ ಕ್ರೀಮ್ ತಯಾರಿಸುವ ಸ್ಥಳಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಕಡ್ಡಾಯವಾಗಿ ಫುಡ್ ಲೈಸನ್ಸ್ ಅನ್ನು ಒಂದು ವಾರದ ಒಳಗೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಫುಡ್ ಲೈಸೆನ್ಸ್ ಪಡೆಯದೇ ಐಸ್ ಕ್ರೀಮ್ ತಯಾರಿಸಬಾರದು. ಲೈಸೆನ್ಸ್ ಪಡೆಯದೇ ಇದ್ದರೆ ಅಂತಹ ಘಟಕಗಳಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರವಿರಾಜ್, ನಾಗೇಶ್ ಮತ್ತು ಪ್ರತಾಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.