Mysore
32
clear sky

Social Media

ಗುರುವಾರ, 13 ಮಾರ್ಚ್ 2025
Light
Dark

ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯರಾಗಿ ಡಾ.ಎಚ್.ಬೀರಪ್ಪ ಅಧಿಕಾರ ಸ್ವೀಕಾರ

ಮೈಸೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರಾಗಿ ಜಯಪುರ ಹೋಬಳಿಯ ಡಿ.ಸಾಲುಂಡಿ ಗ್ರಾಮದ ಡಾ.ಎಚ್ ಬೀರಪ್ಪ ಅವರು ಗುರುವಾರ(ಆ.29) ಅಧಿಕಾರಿ ಸ್ವೀಕರಿಸಿದರು.

ವಿವಿ ಕುಲಪತಿ ಲಿಂಗರಾಜ ಗಾಂಧಿ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಆದೇಶದನ್ವಯ ಅಧಿಕಾರ ಸ್ವೀಕರಿಸಿದ್ದು, ಮೂರು ವರ್ಷಗಳ ಅವಧಿಗೆ ಈ ಸದಸ್ಯತ್ವ ಜಾರಿಯಲ್ಲಿರಲಿದೆ.

ಬೀರಪ್ಪ ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಜೊತೆಗೆ ಸಿದ್ದರಾಮಯ್ಯನವರ ರಾಜಕೀಯ ಸಂವಹನ ಅಭಿವೃದ್ಧಿ ದೃಷ್ಠಿಕೋನ ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸುಮಾರು ಎರಡು ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಜೊತೆಗೆ ಕಾವೇರಿ ಹೋರಾಟದಲ್ಲಿ ಏಕಾಂಗಿ ಪ್ರತಿಭಟನೆ ಮಾಡಿ ತನ್ನ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ಬೆಂಗಳೂರು ನಗರ ವಿವಿಯು ವಿಧಾನಸೌಧದ ಮೊಗ್ಗಲಲ್ಲೇ ಇದ್ದು, ವಿವಿಯಲ್ಲಿ ದೇಶಕ್ಕೆ ಮಾದರಿಯಾಗುವ  ಅತ್ಯುತ್ತಮವಾದ ಶೈಕ್ಷಣಿಕ ನೀತಿ, ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಶಿಕ್ಷಣವು ಜನಸಾಮಾನ್ಯರಿಗೆ ಕೈಗೆಟುಕುವಂತೆ ವಿವಿಯಲ್ಲಿ ಆಡಳಿತ ನೀತಿ ರೂಪಿಸಲಾಗುವುದು ಎಂದು ಡಾ.ಎಚ್.‌ ಬೀರಪ್ಪ ತಿಳಿಸಿದರು.

Tags: