ಮೈಸೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ತಿಕ್ಕಾಟ ಮತ್ತೆ ಮುಂದುವರಿದಿದೆ. ಶಿವಕುಮಾರ್ ಮಾನಸಿಕ ಅ್ವಸಸ್ಥರಂತೆ ಮಾತನಾಡುತ್ತಾರೆ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್ ಬ್ಯಾನರ್ ಹರಿದ ವಿಚಾರಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿರುವುದಕ್ಕೆ ಕೆಂಡಾಮಂಡಲರಾದ ಅಶ್ವತ್ ಮಾರಾಯಣ್, ಅಧಿಕಾರ ನಡೆಸಿರುವವರಿಗೆ ಎಲ್ಲವು ಸಹ ಗೊತ್ತಿದೆ. ಡಿ.ಕೆ.ಶಿವಕುಮಾರ್ ಮಾನಸಿಕ ಅಸ್ವಸ್ಥರಂತೆ ಮಾತಾಡುತ್ತಿದ್ದಾರೆ .ಇವರ ಗೂಂಡಾಗಿರಿಗೆ ಜಗ್ಗಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತಪ್ಪನ್ನು ಸರಿಪಡಿಸಿ ಎಂದು ಹೇಳಬೇಕು. ಅದನ್ನು ಬಿಟ್ಟು ಈ ರೀತಿ ಪ್ರಚೋದನೆ ನೀಡುವುದು ಸರಿಯಲ್ಲ. ಬೇಕಿದ್ದರೆ ಹೋಗಿ ದೂರು ನೀಡಲಿ. ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಅಂತ ಸಲಹೆ ನೀಡಿದರು





