ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ತನ್ನ ತಂಗಿಯೇ ಮುಂದೆಯೇ ಆಕೆಯ ಅಣ್ಣನನ್ನು ಕೊಂದು ಹಾಕಿದ ಘಟನೆ ಮೈಸೂರು ನಗರದ ಕುವೆಂಪುನಗರದಲ್ಲಿ ಶನಿವಾರ (ಜೂನ್.8) ರಂದು ನಡೆದಿದೆ.
ಅಭಿಷೇಕ್ (27) ಕೊಲೆಯಾದ ಮೃತ ಯುವಕನಾದರೇ, ರವಿಚಂದ್ರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇನ್ನು ಕೊಲೆಯಾದ ಅಭಿಷೇಕ್ ತಂಗಿ ವಿದ್ಯಾ ಆಗಿದ್ದಾರೆ. ಮೈಸೂರಿನ ಕುವೆಂಪು ನಗರ ಐ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ.
ವಿದ್ಯಾ ಹಾಗೂ ರವಿಚಂದ್ರ ಅವರಿಬ್ಬರ ವಿವಾಹವನ್ನು ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಾಡಿತ್ತು. ಇದಾದ ಬಳಿಕ ಈಗ 6 ತಿಂಗಳಿನಿಂದ ವರದಕ್ಷಿಣೆ ರೂಪದಲ್ಲಿ ಹಣ ತಂದು ಕೊಡುವಂತೆ ಕಿರುಕುಳ ನೀಡುತ್ತಿದ್ದ ರವಿಚಂದ್ರ. ತಾನು ಜಿಮ್ ತೆರೆಯಲು 5 ಲಕ್ಷ ಹಣ ಕೇಳಿದ್ದು, ಇದನ್ನು ತವರು ಮೆನಯಿಂದ ವರದಕ್ಷಿಣೆ ತರುವಂತೆ ಪ್ರತಿನಿತ್ಯ ವಿದ್ಯಾಗೆ ರವಿಚಂದ್ರ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ತಂಗಿ ತನ್ನ ಅಣ್ಣ ಅಭಿಷೇಕ್‌ಗೆ ಕರೆ ಮಾಡಿದ್ದಾಳೆ.
ವಿದ್ಯಾ ಅಣ್ಣ ಅಭಿಷೇಕ್ ಮನೆಗೆ ಬರುತ್ತಿದ್ದಂತೆ ಬಾಗಿಲು ಹಾಕಿ ತಂಗಿಯ ಗಂಡ ರವಿಚಂದ್ರ ಹಾಗೂ ಅವರ ತಮ್ಮ ಕುಮಾರ್ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಅಭಿಷೇಕ್ ಜೊತೆ ಬಂದ ಸ್ನೇಹಿತನಿಗೂ, ಅಭಿಷೇಕ್ ತಾಯಿ ಭಾಗ್ಯಮ್ಮ ಮೇಲೂ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಅಭಿಷೇಕ್ ಮಡಿದಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.