Mysore
23
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ʼದೋಸ್ತಿ ರಾಂಗ್‌ ಟರ್ನ್‌ʼ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್‌

ʼಕೈʼ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಆರೋಪ-ಪ್ರತ್ಯಾರೋಪಗಳ ವಿಡಿಯೋ ತುಣುಕು ಪ್ರದರ್ಶನ…

ಮೈಸೂರು: ದೋಸ್ತಿ ಪಕ್ಷಗಳ ಪಾದಯಾತ್ರೆಗೆ ಟಕ್ಕರ್‌ ಕೊಡಲು  ಶುಕ್ರವಾರ ನಗರದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಜನಾಂದೋಲದ ಸಭೆಯಲ್ಲಿ ಮೈತ್ರಿ ಪಕ್ಷವಾದ ಬಿಜೆಪಿ-ಜೆಡಿಎಸ್‌ನ ಆರೋಪ-ಪ್ರತ್ಯಾರೋಪಗಳ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.

ಮೊದಲಿಗೆ ಮೈಸೂರು ಚಲೋ ಪಾದಯಾತ್ರೆಗೆ ಅಪಸ್ವರ ವ್ಯಕ್ತಪಡಿಸಿದ ಎಚ್‌.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ವಿಡಿಯೊಗಳನ್ನು ಪ್ರದರ್ಶಿಸಿದರು.

ಹೆಚ್.ಡಿ ದೇವೇಗೌಡರು ಬಿಜೆಪಿ ವಿರುದ್ಧ ಹಾಗೂ ಬಿಎಸ್‌ ಯಡಿಯೂರಪ್ಪ ಅವರು ಜೆಡಿಎಸ್‌ ಹಾಗೂ ಆ ಪಕ್ಷದ ನಾಯಕರನ್ನು ಟೀಕಿಸಿದ್ದ ವಿಡಿಯೊಗಳನ್ನು ಪ್ರದರ್ಶಿಸಲಾಯಿತು.

ಇನ್ನು ಬಿಎಸ್‌ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್‌ ನೀಡಿದ್ದ ವಿಡಿಯೋ ಹೇಳಿಕೆಗಳನ್ನು ಪ್ರಸಾರ ಸಹ ಪ್ರದರ್ಶಿಸಿದರು.

ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಯ ಸಿಪಿ ಯೋಗೇಶ್ವರ್‌ ಅವರು ಪರಸ್ಪರ ಟೀಕಿಸಿದ್ದ ವಿಡಿಯೋ ಹಾಗೂ ಎಚ್ ಡಿ ಕೆ ವಿರುದ್ಧ ಬಿಜೆಪಿ ಶಾಸಕ ಅಶ್ವಥ್‌ ನಾರಾಯಣ್‌ ಮಾಡಿದ್ದ ಆರೋಪಗಳ ವಿಡಿಯೋ ತುಣುಕುಗಳನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.

 

 

 

 

 

Tags:
error: Content is protected !!