ಮೈಸೂರು: ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ ತಮ್ಮ ದಾಂಪತ್ಯ ಜೀವನದ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ ಮದುವೆ ಸಿದ್ದತೆಯಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಅವರು ಈ ವೇಳೆ ನಂದಿ ಧ್ವಜವನ್ನು ಹೊತ್ತು ಕುಣಿದಿದ್ದಾರೆ.
ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಭಾನುವಾರ ನಡೆದ ಶಿವರಾತ್ರಿ ಶಿವಯೋಗಿಗಳ ೧,೦೬೫ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ ನಂದಿಧ್ವಜವನ್ನು ಹೊತ್ತು ಕುಣಿದು ಗಮನ ಸೆಳೆದರು. ಅವರ ಭಾವೀ ಪತ್ನಿ ಡಾ.ಧನ್ಯತಾ, ಸುತ್ತೂರು ಶ್ರೀಗಳು, ಇತರ ಮಠಾಧೀಶರು, ಗಣ್ಯರು ಹಾಜರಿದ್ದರು.



