ನಂಜನಗೂಡು : ವೈದ್ಯರ ಮನೆಯಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ. ನಂಜನಗೂಡು ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಮನೆ ಬಾಗಿಲು ಮೀಟಿ ಕೃತ್ಯವೆಸಗಿರುವ ಕಳ್ಳರು 225 ಗ್ರಾಂ ಚಿನ್ನ ಹಾಗೂ ಮೂರು ಲಕ್ಷ ನಗದು ದೋಚಿದ್ದಾರೆ.
ನಂಜನಗೂಡು ಪಟ್ಟಣದಲ್ಲಿ ಸರ್ಕಾರಿ ಆಯುರ್ವೇದಿಕ್ ವೈದ್ಯ ಡಾ .ಅಮೂಲ್ಯ, ಡಾ .ಮಧು ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬೀಗ ಮುರಿದು ಕೃತ್ಯವೆಸಗಿದ್ದಾರೆ. ವೈದ್ಯದಂಪತಿ ಶನಿವಾರ ಚಿಕ್ಕಮಂಗಳೂರಿಗೆ ತೆರಳಿದ್ದರು.
ಸೋಮವಾರ ಹಿಂದಿರುಗಿದಾಗ ಬೀಗ ಮುರಿದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಡಿವೈಎಸ್ಪಿ ರಘು, ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ ಮತ್ತು ಬೆರಳು ಮುದ್ರಾ ತಂಡ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ನಂಜನಗೂಡು ಪೊಲೀಸರು ಬಲೆ ಬೀಸಿದ್ದಾರೆ.





