ಮೈಸೂರು: ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ಎಚ್‌ಡಿ ಕುಮಾರಸ್ವಾಮಿ ಅವರ ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಎಚ್‌ಡಿಕೆಯಿಂದ ತೆರವಾಗಿರುವ ಕ್ಷೇತ್ರದಿಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪರ್ಧೆ ಮಾಡುವುದಿಲ್ಲ. ಇದೊಂದು ಕೇವಲ ರಾಜಕೀಯ ಗಿಮಿಕ್ ಅಷ್ಟೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು. ಡಿಕೆಶಿ ಅವರ ಮಾತಿನಲ್ಲಿ ಕೇವಲ ರಾಜಕೀಯ ತಂತ್ರಗಾರಿಕೆಯಷ್ಟೆ ಇದೆ. ಈ ಕ್ಷೇತ್ರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡಿಸುವ ಮೂಲಕ ನಾನು ಮತ ಕೇಳಿದರೇ ನೀಡುತ್ತಾರಾ ಎಂದು ಅವರು ಚನ್ನಪಟ್ಟಣ ಜನರನ್ನು ಕೇಳುತ್ತಿದ್ದಾರೆ ಎಂದರು.
ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಸ್ಪರ್ಧೇ ವಿಚಾರವಾಗಿ ಎಲ್ಲಿಯೂ ಹೇಳಿಲ್ಲ. ಜನಗಳ ಅಭಿಪ್ರಾಯ ನನ್ನ ಪರವಾಗಿದೆ ಎಂದಷ್ಟೆ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಈ ಸ್ಪರ್ಧೆ ಬಗ್ಗೆ ಮೈತ್ರಿ ಹೈಕಮಾಂಡ್ ತೀರ್ಮಾನ ಮಾಡಲಿದೆ.
ಇನ್ನು ನಮ್ಮ ಸ್ಪರ್ಧಿ ಯಾರೆಂದು ಈವರೆಗೂ ಚಿಂತನೆ ಮಾಡಿಲ್ಲ. ಕೋರ್ ಕಮಿಟಿ ಅಧ್ಯಕ್ಷ ನಾನೇ ಆಗಿರುವ ಕಾರಣ ವೈಯಕ್ತಿಕ ಅಭಿಪ್ರಾಯ ಹೇಳಲು ಆಗುವುದಿಲ್ಲ ಈ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ನಾನೇ ಮಾಹಿತಿ ನೀಡುತ್ತೇನೆ ಎಂದು ಜಿಟಿಡಿ ತಿಳಿಸಿದರು.





