Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ನಾಲೆ ಕುಸಿತ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

ತಿ.ನರಸೀಪುರ : ನೆನ್ನೆ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಯಾಚೇನಹಳ್ಳಿ ಗ್ರಾಮದ ಸಮೀಪದಲ್ಲಿ ಸಿಡಿಎಸ್ ನಾಲೆ ಕುಸಿತ ಕಂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.
ಯಾಚೇನಹಳ್ಳಿ ಗ್ರಾಮದ ಅನತಿ ದೂರದಲ್ಲಿ ನಾಲೆಯು ಹೊಡೆದು ಹೋಗಿದ್ದು,ನಾಲೆಯ ಬದಿಯ ಜಮೀನುಗಳಲ್ಲಿ ಬೆಳೆದಿದ್ದ ಭತ್ತ ಬೆಳೆಯುವ ಸಂಪೂರ್ಣ ನಾಶವಾಗಿದೆ. ನಾಲೆಯ ದುರಸ್ತಿ ಕೆಲಸ ಪ್ರಗತಿಯಲ್ಲಿದ್ದು, ಬಿದ್ದಿರುವ ಕೋಡಿಯನ್ನು ತಡೆಯಲು ಸಾಧ್ಯವಾಗಿಲ್ಲ.ನಾಲೆ ಕೋಡಿ ದೊಡ್ಡದಾಗಿ ಬಿದ್ದಿರುವುದರಿಂದ ನಾಲಾ ಕೇಳಬದಿಯಲ್ಲಿರುವ ಸರಿ ಸುಮಾರು 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಯು ಸಂಪೂರ್ಣ ನೆಲಕಚ್ಚಿದೆ.

ಸ್ಥಳ ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು,ಸ್ಥಳೀಯ ಶಾಸಕರು ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದು,ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ದುರಸ್ತಿ ಕೆಲಸ ಪ್ರಗತಿಯಲ್ಲಿದೆ.
ನೆನ್ನೆಯ ಮಳೆಯಿಂದ ಯಾಚೇನೇಹಳ್ಳಿ ಮತ್ತು ಹನುಮನಾಳು ಗ್ರಾಮಗಳಲ್ಲಿ ಸುಮಾರು 250 ಎಕರೆ ಬೆಳೆ ನಾಶ ಆಗಿರಬಹುದು ಎಂದು ಕೃಷಿ ಇಲಾಖೆಯು ಅಂದಾಜಿಸಿದೆ.ವರದಿ ಬಂದ ನಂತರ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು

ಜಿಲ್ಲಾಧಿಕಾರಿಗಳ ಜೊತೆ ಸ್ಥಳ ಪರಿಶೀಲನೆಯಲ್ಲಿ ಭಾಗಿಯಾಗಿದ್ದ ಶಾಸಕರು ಮಾತನಾಡಿ,ಕಳೆದ ಬಾರಿ ಅತಿವೃಷ್ಟಿಯಿಂದ ಆದ ತೊಂದರೆ ಬಹಳ ಕಡಿಮೆ.ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ನಾಲೆಗಳಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಹಾಗಾಗಿ ನಾಲೆಗಳು ತುಂಬಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ನಾಲೆಗಳು ತೊಂದರೆಗೊಳಗಾಗುತ್ತಿದೆ.ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು,ಆದಷ್ಟು ಬೇಗ ತೊಂದರೆಯನ್ನು ಸರಿಪಡಿಸಲಾಗುವುದು ತೊಂದರೆಗೊಳಗಾದ ಸಂತ್ರಸ್ಥರಿಗೆ ಪರಿಹಾರ ಸಿಗಲು ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮ, ತಹಸೀಲ್ದಾರ್ ಸಿ.ಜಿ. ಗೀತಾ,ನೀರಾವರಿ ಇಲಾಖೆ ಎಇಇ ಶಿವಮಾಧವನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಶಿಕಲಾ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ,ಜೆಇ ಪ್ರದೀಪ್,ಸ್ಥಳೀಯ ಜೆಡಿಎಸ್ ಮುಖಂಡ ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಆರ್ .ಮಂಜುನಾಥ್ , ಬನ್ನೂರು ಕುಮಾರ್ ,ಗ್ರಾಪಂ ಸದಸ್ಯ ಹೋಟೆಲ್ ರಾಮಸ್ವಾಮಿ,ಚೇತನಶಟ್ಟಿ, ರೈತರು, ಗ್ರಾಮಸ್ಥರು ಹಾಜರಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!