Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಧರ್ಮಸ್ಥಳ ಪ್ರಕರಣ : ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ

srivathsvaa

ಮೈಸೂರು : ಧರ್ಮಸ್ಥಳ ಅಸಹಜ ಸಾವು ಪ್ರಕರಣ ಕುರಿತು ರಾಜ್ಯ ಸರ್ಕಾರ ರಚಿಸಿರುವರು ಎಸ್ಐಟಿ ತನಿಖೆಯಿಂದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಧರ್ಮಸ್ಥಳಕ್ಕೆ ಅಪಪ್ರಚಾರವಾಗುತ್ತಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಅಪ ಪ್ರಚಾರ ಮಾಡಲು ಬಿಡಲ್ಲ. ಮಂಜುನಾಥ್ ಸ್ವಾಮಿ ಅಡಿಯಲ್ಲಿ ಹೆಣ ಇದೆ ಅಂತ ಅಂದ್ರೆ ತಗೆಸಿಬಿಡ್ತಾರಾ.? ಎಂದು ಖಾರವಾಗಿ ಪ್ರತಿಕ್ರಿಯಿದ್ದಾರೆ.

ರಾಜ್ಯ ಸರ್ಕಾರದ ಸಹಾನುಭೂತಿಯಿಂದ ಇಷ್ಟೇಲ್ಲ ನಡೆಯುತ್ತಿದೆ. ಮೈಸೂರು ಮುಡಾ ಹಗರಣ, ಅಕ್ರಮ ರೆಸಾರ್ಟ್ ಹಗರಣ, ಕೋಟ್ಯಾಂತರ ರೂಪಾಯಿ ಡ್ರಗ್ಸ್ ಕೇಸ್ ಆಯಿತು, ಇದೆಲ್ಲವನ್ನ ಎಸ್ಐಟಿಗೆ ವಹಿಸಿದ್ರಾ.? ಇಲ್ಲ ಆದರೆ, ಆದರೆ ಧರ್ಮಸ್ಥಳಕ್ಕೆ ಯಾಕೆ ಇಷ್ಟು ಮುತುವರ್ಜಿ? ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ಸಚಿವ ರಾಜಣ್ಣ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, ಸಚಿವ ರಾಜಣ್ಣ ಸತ್ಯ ಹೇಳಿದ್ದೇ ತಪ್ಪಾ.? ಸತ್ಯ ಹೇಳಿದ್ದಕ್ಕೆ ವಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ.? ರಾಜಣ್ಣ ಅವರ ಅಧ್ಯಕ್ಷರು ಹೇಳಿದ್ದನ್ನ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದ್ದಾರೆ. ಇದು ಒಬ್ಬ ಹಿಂದುಳಿದ ನಾಯಕನಿಗೆ ಮಾಡಿದ ಅಪಮಾನ ಎಂದು ಹೇಳಿದರು.

ನಟ ದರ್ಶನ್ ಜಾಮೀನು ಅರ್ಜಿ ವಜಾ ವಿಚಾರ ಮಾತನಾಡಿ, ಇದು ಸತ್ಯಕ್ಕೆ ಸಂದ ಜಯ. ಸುಪ್ರೀಂ ನೀಡಿದ ತೀರ್ಪನ್ನ‌ ಯಾರಾದರು ಪ್ರಶ್ನೆ ಮಾಡಲಿಕ್ಕೆ ಸಾಧ್ಯನಾ? ಸುಪ್ರೀಂ ಕೋರ್ಟ್ ಎಲ್ಲವನ್ನೂ ಅವಲೋಕಿಸಿ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಒಂದೆ. ಈ ತೀರ್ಪುನ್ನ ನಾನು ಸ್ವಾಗತ ಮಾಡುತ್ತೇನೆ ಎಂದರು.

Tags:
error: Content is protected !!