Mysore
23
clear sky

Social Media

ಸೋಮವಾರ, 05 ಜನವರಿ 2026
Light
Dark

ಜನವರಿ 4ರಂದು ನಂಜನಗೂಡು ಬಂದ್‌ಗೆ ಕರೆ ನೀಡಿದ ಭಕ್ತರು

ಡಿಸೆಂಬರ್‌ 26ರಂದು ನಂಜನಗೂಡಿನಲ್ಲಿ ನಡೆಯಬೇಕಿದ್ದ ಅಂಧಕಾಸುರ ಸಂಹಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಭಕ್ತರು ಅಂಧಕಾಸುರನ ಚಿತ್ರವನ್ನು ಸಂಹಾರ ಮಂಟಪ ವೃತ್ತದಲ್ಲಿ ರಂಗೋಲಿನಲ್ಲಿ ಬರೆಯುತ್ತಾರೆ. ಬಳಿಕ ಉತ್ಸವಮೂರ್ತಿಯನ್ನು ಈ ರಂಗೋಲಿ ಬಳಿಕ ತಂದು ಕಾಲಿನಿಂದ ಅಂಧಕಾಸುರನ ರಂಗೋಲಿಯನ್ನು ಅಳಿಸಿಹಾಕುವ ಮೂಲಕ ಅಂಧಕಾಸುರ ವಧೆಯನ್ನು ಆಚರಿಸಲಾಗುತ್ತದೆ.

ಹೀಗೆ ನೂರಾರು ವರ್ಷಗಳಿಂದ ಇದೇ ರೀತಿಯ ಆಚರಣೆಯನ್ನು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದವರಿಗೆ ಪ್ರಗತಿಪರ ಚಿಂತಕರು ಅಡ್ಡಿ ವ್ಯಕ್ತಪಡಿಸಿದ್ದಾರೆ. ಅಂಧಕಾಸುರ ವಧೆಯನ್ನು ಆಚರಿಸಬಾರದು ಎಂದು ಪ್ರಗತಿಪರ ಹೋರಾಟಗಾರರು ಪಟ್ಟುಹಿಡಿದಿದ್ದರು. ಅತ್ತ ಭಕ್ತಾದಿಗಳು ಮಾತ್ರ ತಾವು ನೂರಾರು ವರ್ಷಗಳಿಂದ ಈ ಆಚರಣೆ ಮಾಡುತ್ತಿದ್ದಾರೆ.

ಆದರೆ ಈ ಬಾರಿ ಅಂಧಕಾಸುರ ವಧೆ ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಭಕ್ತಾದಿಗಳಿಗೆ ಭಾರೀ ನಿರಾಸೆಯುಂಟಾಗಿದೆ. ಅಲ್ಲದೇ ಈ ವಾಗ್ವಾದದ ಸಂದರ್ಭದಲ್ಲಿ ದೇವರ ಮೂರ್ತಿ ಮೇಲೆ ನೀರನ್ನೂ ಸಹ ಎರಚಲಾಗಿದೆ. ಇದರಿಂದ ಬೇಸತ್ತ ಭಕ್ತಾದಿಗಳು ಜನವರಿ 4ರಂದು ನಂಜನಗೂಡು ಬಂದ್‌ ಆಚರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!