Mysore
22
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

ಹುಣಸೂರು: ಕಾಡಿನ ಅರಣ್ಯದಂಚಿನಲ್ಲಿ ಮೇಯುತ್ತಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿ ಕೊಂದು ಹಾಕಿರುವ ಘಟನೆ ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ಟ್ರಂಚ್‌ ಬಳಿ ಮೇವು ಮೇಯುತ್ತಿದ್ದ ಜಿಂಕೆಗಳನ್ನು ಕಂಡ ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೋಗಿವೆ. ಈ ವೇಳೆ ಜಿಂಕೆಗಳ ಹಿಂಡು ಅರಣ್ಯದೊಳಕ್ಕೆ ಓಡಿವೆ. ಆದರೂ ಬಿಡದ ಬೀದಿ ನಾಯಿಗಳು  ಒಂದು ಜಿಂಕೆಯನ್ನು ಬೇಟೆಯಾಡಿ ಕೊಂದು ಹಾಕಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೃತ ಜಿಂಕೆಯನ್ನು ಬೇರೆ ಕಡೆಗೆ ಸಾಗಿಸಿದ್ದಾರೆ.

Tags:
error: Content is protected !!