Mysore
20
clear sky

Social Media

ಶುಕ್ರವಾರ, 30 ಜನವರಿ 2026
Light
Dark

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ : ಆರೋಪಿಗಳ ಬಂಧನ !

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ರಾತ್ರಿ ಗಸ್ತು ವಾಡುತ್ತಿದ್ದ ಅರಣ್ಯ ಸಿಬ್ಬಂದಿಗೆ ಹನಗೋಡು ಮತ್ತು ಅಬ್ಬೂರು ಗ್ರಾಮದ ರಸ್ತೆಯಲ್ಲಿರುವ ಕಾಳಮ್ಮನ ದೇವಸ್ಥಾನದ ಹತ್ತಿರ ಎರಡು ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಕೊಂದು ವಾಂಸವನ್ನು ಸಾಗಾಣಿಕೆ ವಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಈ ವೇಳೆ ಶಿಂಡೇನಹಳ್ಳಿಯ ಶ್ರೀನಿವಾಸ, ಬಿಲ್ಲೇನಹೊಸಹಳ್ಳಿಯ ಶಿವು, ಹನಗೋಡು ಗ್ರಾಮದ ಶ್ರೀನಿವಾಸ ಹಾಗೂ ಕಿರಂಗೂರು ಗ್ರಾಮದ ಬಸವಲಿಂಗಾಚಾರಿ ಎಂಬವರನ್ನು ಬಂಧಿಸಿದ್ದು, ಉಳಿದ ಆರು ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಬಂಧಿತರಿಂದ ೨೫ ಕೆಜಿ ಚುಕ್ಕೆ ಜಿಂಕೆ ಮಾಂಸ ಸೇರಿದಂತೆ ಕೃತ್ಯಕ್ಕೆ ಬಳಸಿದ ಹತ್ಯಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:
error: Content is protected !!