Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ನಾಗರಹೊಳೆ: ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರ ಬಂಧನ

ಮೈಸೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತು ಮಾಡುತ್ತಿರುವಾಗ ಹನಗೋಡು ಮತ್ತು ಅಬೂರು ಗ್ರಾಮದ ರಸ್ತೆಯಲ್ಲಿರುವ ಕಾಳಮ್ಮನ ದೇವಸ್ಥಾನದ ಹತ್ತಿರ ಕಾಡುಪ್ರಾಣಿಯಾದ ಎರಡು ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಕೊಂದು, ಮಾಂಸವನ್ನು ಸಾಗಾಣಿಕೆ ಮಾಡುತ್ತಿದ್ದ ಆಸಾಮಿಗಳಾದ ಎ. ಶ್ರೀನಿವಾಸ.ಎಂ ಬಿನ್ ಮಂಜೇಗೌಡ(ಅಲಿಯಾಸ್ ದಾಸ), ವಯಸ್ಸು-19 ವರ್ಷ, ಶಿಂಡೇನಹಳ್ಳಿ ಗ್ರಾಮ, ಎ2. ಶಿವು ಬಿನ್ ಲೇ. ಮಾದೇಶ (ಅಲಿಯಾಸ್ ಮಹೇಶ), ವಯಸ್ಸು-18 ವರ್ಷ, ಜಿಲ್ಲೇನಹೊಸಳ್ಳಿ ಗ್ರಾಮ, ಎ3. ಶ್ರೀನಿವಾಸ ಬಿನ್ ಸುಬ್ಬಾಚಾರಿ, ವಯಸ್ಸು-42 ವರ್ಷ, ಹನಗೋಡು ಗ್ರಾಮ, ಮತ್ತು ಎ4, ಬಸವಲಿಂಗಾಚಾರಿ ಬಿನ್ ಲೇ ಬಸವರಾಜಾಚಾರಿ, ವಯಸ್ಸು-36ವರ್ಷ, ಕಿರಂಗೂರು ಗ್ರಾಮ, ಸದರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉಳಿದ 06 ಆರೋಪಿಗಳು ತಲೆ ಮರೆಸಿಕೊಂಡಿದ್ದು. ಬಂಧಿತರಿಂದ 25 ಕೆ.ಜಿ. ಚುಕ್ಕೆ ಮಾಂಸ ಸೇರಿದಂತೆ ಕೃತ್ಯಕ್ಕೆ ಬಳಸಿದ ಹತ್ಯಾರು ಹಾಗೂ ಒಟ್ಟು ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಳಾ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Tags:
error: Content is protected !!