ಮೈಸೂರು: ಸ್ವಚ್ಛ ನಗರಿ ಮೈಸೂರು ಇತ್ತೀಚೆಗೆ ಗುಂಡಿಗಳ ನಗರಿ ಎಂಬ ಹೆಸರಿಗೆ ಆಹ್ವಾನ ನೀಡುತ್ತಿದೆ. ದೀಪಾವಳಿ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ, ಮೈಸೂರು ಪಾಲಿಕೆಯ ಗಮನ ಸೆಳೆಯೋ ಪ್ರಯತ್ನ ಮಾಡಲಾಗಿದೆ.
ಕೃಷ್ಣರಾಜ ಯುವ ಬಳಗ ವತಿಯಿಂದ ಮಧ್ವಚಾರ್ಯ ರಸ್ತೆ ಬಳಿಯಿರುವ ಗಾಡಿಚೌಕದ ಬಳಿ ಗುಂಡಿಗಳ ಜೊತೆ ದೀಪಾವಳಿ ಆಚರಿಸಿ ಆಕ್ರೋಶ ಹೊರಹಾಕಲಾಗಿದೆ.
ಮೈಸೂರು ನಗರ ಅಲ್ಲಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳ ಸುತ್ತ ದೀಪಗಳನ್ನು ಬೆಳಗಿಸುವ ಮೂಲಕ ಅಣಕು ಪ್ರದರ್ಶನ ನಡೆಸಲಾಯಿತು. ಮೈಸೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ಸೆಳೆಯಲು ಗುಂಡಿಗಳ ಜೊತೆ ವಿಶಿಷ್ಪವಾಗಿ ದೀಪಾವಳಿ ಆಚರಿಸಲಾಗಿದೆ.