Mysore
19
scattered clouds

Social Media

ಬುಧವಾರ, 04 ಫೆಬ್ರವರಿ 2026
Light
Dark

ದಲಿತರು ಯದುವೀರ್ ಬೆಂಬಲಿಸಿ: ಎನ್.ಮಹೇಶ್

  • ಬಿಜೆಪಿ ಹಮ್ಮಿಕೊಂಡಿದ್ದ ಬಲಗೈ ಬಲವರ್ಧನೆ ಸಭೆುಂಲ್ಲಿ ಸಾವಿರಾರು ಮಂದಿ ಭಾಗಿ
  •  ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ

ಮೈಸೂರು: ಹಳೆ ಮೈಸೂರು ಭಾಗದಲ್ಲಿ ದಲಿತರು ಉತ್ತಮವಾಗಿ ಬದುಕು ನಡೆಸಲು, ಸಾಕ್ಷರತೆಯಲ್ಲಿ ಮುಂದಿರಲು ಮೈಸೂರು ಮಹಾರಾಜರು ಕಾರಣರಾಗಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ದಲಿತ ಸಮುದಾಯದವರು ಮೈಸೂರು ರಾಜಮನೆತನದ ಕುಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಮನವಿ ಮಾಡಿದರು.

ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಬಲಗೈ ಬಲವರ್ಧನೆ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ದಲಿತರು ಹೆಚ್ಚು ವಿದ್ಯಾವಂತರಾಗಲು ಮತ್ತು ಉದ್ಯೋಗ ಪಡೆಯಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಒಡೆಯರ್ ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ೮೦೦ ಶಾಲೆಗಳನ್ನು ತೆರೆದಿದ್ದರು. ಅಸ್ಪಶ್ಯತೆ ಆಚರಣೆ ಇರುವ ಸಂದರ್ಭದಲ್ಲಿ ದಲಿತರಿಗೆ ಅರಮನೆಗೆ ಪ್ರವೇಶ ನೀಡಿದ್ದರು. ಪ್ರಜಾಪ್ರತಿನಿಧಿ ಸಭೆಗೆ ೮ ಅಸ್ಪಶ್ಯರನ್ನು ಆಯ್ಕೆ ಮಾಡಿದ್ದರು.

ಭೂ ಸುಧಾರಣೆ ಕಾಯಿದೆ ತಂದು ದಲಿತರಿಗೆ ಭೂಮಿ ಹಕ್ಕು ನೀಡಿದ್ದರು. ಅಲ್ಲದೆ, ಸರ್ಕಾರಿ ಉದ್ಯೋಗದಲ್ಲೂ ಮೀಸಲಾತಿ ನೀಡಿದ್ದರು. ಇಂತಹ ಮೈಸೂರು ರಾಜಮನೆತನದ ಕುಡಿ ಯದುವೀರ್ ಅವರನ್ನು ಗೆಲ್ಲಿಸಿ ಅವರ ಋಣವನ್ನು ತೀರಿಸಬೇಕು ಎಂದರು.

Tags:
error: Content is protected !!