ಮೈಸೂರು: ಹಳೆ ಮೈಸೂರು ಭಾಗದ ದಲಿತರ ಗಟ್ಟಿ ಧ್ವನಿಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯಿಂದ ದಲಿತ ಸಮುದಾಯದಲ್ಲಿ ನಿಷಬ್ದ ಸೃಷ್ಠಿಯಾಗಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಭಾವುಕರಾಗಿ ನುಡಿದರು.
ರಾಜಕೀಯ ಜೀವನ ಹಾಗೂ ಸಾರ್ವಜನಿಕ ಜೀವನದ ತತ್ವ ಸಿದ್ದಾಂತದಲ್ಲಿ ಎಂದು ರಾಜೀ ಮಾಡಿಕೊಳ್ಳದೇ, ಆನೆ ನಡೆದಿದ್ದೇ ದಾರಿ ಎನ್ನುವಂತೆ 50 ವರ್ಷಗಳ ಸುದೀರ್ಘ ಅವಧಿಯ ಸಾರ್ವಜನಿಕ ಜೀವನ ನಡೆಸಿದ್ದಾರೆ. ದಲಿತರ ಪರವಾಗಿ ಗಟ್ಟಿ ದ್ವನಿಯಾಗಿ ಪ್ರಭಾವ ಬೀರಿದರು, ಅವರ ಅಗಲಿಕೆಯಿಂದ ಉಂಟಾದ ನಾಯಕತ್ವದ ಕೊರತೆಯನ್ನು ಯಾರಿಂದಲೂ ತುಂಬುವುದಕ್ಕೆ ಸಾದ್ಯವಿಲ್ಲ. ಅವರ ಅಗಲಿಕೆಯಿಂದ ರಾಜ್ಯದ ಸಾರ್ವಜನಿಕ ಕ್ಷೇತ್ರ ಹಾಗೂ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಳೆದ 12 ದಿನಗಳ ಹಿಂದೆ ಪ್ರಸಾದ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇವು ಎಂದು ಇದೇ ಸಮಯದಲ್ಲಿ ನೆನೆದರು.