ಮೈಸೂರು : ಜೆಡಿಎಸ್ ಪಕ್ಷದಲ್ಲಿ ಯಾವ ನಾಯಕರನ್ನು ಬೆಳೆಯಲು ಅಪ್ಪ-ಮಕ್ಕಳು ಬಿಡುವುದಿಲ್ಲ, ಕೇವಲ ಅವರ ಕುಟುಂಬ ಮಾತ್ರ ಅಧಿಕಾರ ಅನುಭವಿಸುತ್ತಾರೆ ಇದು ಜೆಡಿಎಸ್ ಇತಿಹಾಸ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ ತಿಳಿಸಿದರು.
ನಗರದ ಮಹಾರಾಜ ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಯಾವ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಕೇವಲ ತಮ್ಮ ಕುಟುಂಬದವರ ಏಳಿಗೆಯನ್ನು ಮಾತ್ರ ನೋಡುತ್ತಾರೆ. ಇದು ಜೆಡಿಎಸ್ ಪಕ್ಷದ ಇತಿಹಾಸ ಎಂದು ತಿಳಿಸಿದರು.
ಇವರ ಈ ನಡವಳಿಕೆಯಿಂದಾಗಿ ಬೇಸರಗೊಂಡ ಅನೇಕ ಜೆಡಿಎಸ್ ನಾಯಕರು ಇಂದು ಅವರ ಪಕ್ಷ ತೊರೆದು ಬಂದಿದ್ದಾರೆ. ಇಂದು ಅವರೊಟ್ಟಿಗೆ ಯಾರೂ ಇಲ್ಲ. ಜೆಡಿಎಸ್ ಕೇವಲ ಅಪ್ಪ-ಮಕ್ಕಳ ಹಾಗೂ ಕುಟುಂಬದ ಪಕ್ಷ ಎಂದು ಆರೋಪಿಸಿದರು.
ವೀಡಿಯೋ ತುಣುಕು
ನೀವು ಕಾಂಗ್ರೆಸ್ ನಾಯಕರು ಹೇಳಿದ್ದನ್ನು ನಂಬಬೇಡಿ. ಒಂದು ಬಾರಿ ನೀವೆ ಈ ಹಿಂದೆ ಬಿಜೆಪಿ-ಜೆಡಿಎಸ್ ಪಕ್ಷದ ನಾಯರು ಮಾತನಾಡಿರುವುದನ್ನು ಒಮ್ಮೆ ನೋಡಿ ಎಂದು ತಮ್ಮ ಭಾಷಣಕ್ಕು ಮುನ್ನ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಬ್ಬರನ್ನೊಬ್ಬರು ಅವಹೇಳನ ಮಾಡಿರುವ ವೀಡಿಯೋ ತುಣಕುಗಳ ಪ್ರದರ್ಶನ ಮಾಡಿದರು.