ಮೈಸೂರು: ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಅರಮನೆ ನಗರಿಯಲ್ಲಿ ಭಾನುವಾರ ತಿರಂಗಾ ಸೈಕಲ್ ರ‍್ಯಾಲಿ ನಡೆಸಲಾಯಿತು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಮ್ಮೆಚ್ಯೂರ್ ಸೈಕ್ಲಿಂಗ್ ಅಸೋಶಿಯೇಷನ್, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮೈಸೂರು ಅಥ್ಲಿಟ್ಸ್ ಕ್ಲಬ್ ವತಿಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ತಿರಂಗಾ ಸೈಕಲ್‌ರಾಲಿಗೆ ಚಾಲನೆ ನೀಡಲಾಯಿತು.
ಚಾಮುಂಡಿವಿಹಾರ ಕ್ರೀಡಾಂಗಣದಿಂದ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗವಾಗಿ ಸುತ್ತಿಕೊಂಡು ಮರಳಿ ಕ್ರೀಡಾಂಂಗಣದಲ್ಲಿ ಅಂತ್ಯವಾಯಿತು. ಜನರ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಟ ೩೦ ನಿಮಿಷಗಳನ್ನು ಪ್ರತಿದಿನ ಮೀಸಲಿಡುವುದು ಹಾಗೂ ಸೈಕಲ್ ಬಳಕೆಯನ್ನು ಆರೋಗ್ಯ ಕಾಪಾಡಿಕೊಳ್ಳಲು ಜನರು ಬಳಸುವಂತೆ ಉತ್ತೆಜಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಕ್ರೀಡಾ ವಿದ್ಯಾರ್ಥಿನಿಯರು, ಸೈಕ್ಲಿಂಗ್ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




